ADVERTISEMENT

ಗಿಲ್ಲಿ ನಟನಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:49 IST
Last Updated 25 ಜನವರಿ 2026, 4:49 IST
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಗಿಲ್ಲಿ ನಟ(ನಟರಾಜ್) ಅವರನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದಿಸಿದರು 
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಗಿಲ್ಲಿ ನಟ(ನಟರಾಜ್) ಅವರನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದಿಸಿದರು    

ಮಳವಳ್ಳಿ: ಕನ್ನಡ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಮಳವಳ್ಳಿಯ ಗಿಲ್ಲಿ ನಟ(ನಟರಾಜ್) ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದಿಸಿದರು.

‘ತಮ್ಮ ನಟನೆಯ ಮೂಲಕ ಜನರ ಮನಸ್ಸು ಗೆದ್ದಿರುವ ಗಿಲ್ಲಿ ನಟ ನಮ್ಮ ತಾಲ್ಲೂಕಿನವರು ಎನ್ನುವುದು ಹೆಮ್ಮೆಯಾಗಿದೆ. ಆ ಮೂಲಕ ಮಳವಳ್ಳಿಯನ್ನು ಮತ್ತಷ್ಟು ಪ್ರಸಿದ್ಧಿಗೊಳಿಸಿದ್ದಾರೆ. ಅವರ ನಟನೆ ಉತ್ತಮ ರೀತಿಯಲ್ಲಿ ಮುಂದುವರೆಯಲಿ’ ಎಂದು ಆಶಿಸಿದರು.

ಗಿಲ್ಲಿ ನಟ ಮಾತನಾಡಿ, ‘ಜನರ ಈ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯವಾಗದು. ಎಲ್ಲರೂ ನನ್ನ ಗೆಲುವಿಗೆ ಸಹಕಾರ ನೀಡಿದ್ದಾರೆ. ಈ ಜನರ ಋಣ ತೀರಿಸಲು ಪ್ರಯತ್ನ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

ಮಲ್ ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಟೌನ್ ಅಧ್ಯಕ್ಷ ದೊಡ್ಡಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ದಿಲೀಪ್ ಕುಮಾರ್, ಮುಖಂಡರಾದ ಸಿ.ವೇದಮೂರ್ತಿ, ಶ್ರೀನಿವಾಸ್, ಚೇತನ್ ಕುಮಾರ್, ದೀಪು ಪಾಲ್ಗೊಂಡಿದ್ದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಗಿಲ್ಲಿ ನಟ(ನಟರಾಜ್) ಅವರನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.