ADVERTISEMENT

ಚಿಕ್ಕಲ್ಲೂರು ಜಾತ್ರೆಗೆ ಜ್ಞಾನಾನಂದ ಚೆನ್ನರಾಜೇ ಅರಸು ಪ್ರಯಾಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:38 IST
Last Updated 4 ಜನವರಿ 2026, 6:38 IST
ಬೆಳಕವಾಡಿ ಸಮೀಪದ ಬೋಪ್ಪೇಗೌಡನಪುರ (ಬಿಜಿಪುರ) ಗ್ರಾಮದ ಮಂಟೇಸ್ವಾಮಿ ಮಠದ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದ ಚೆನ್ನರಾಜೇ ಅರಸು ಚಿಕ್ಕಲ್ಲೂರು ಜಾತ್ರೆಗೆ ಪ್ರಯಾಣ ಹೊರಟರು
ಬೆಳಕವಾಡಿ ಸಮೀಪದ ಬೋಪ್ಪೇಗೌಡನಪುರ (ಬಿಜಿಪುರ) ಗ್ರಾಮದ ಮಂಟೇಸ್ವಾಮಿ ಮಠದ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದ ಚೆನ್ನರಾಜೇ ಅರಸು ಚಿಕ್ಕಲ್ಲೂರು ಜಾತ್ರೆಗೆ ಪ್ರಯಾಣ ಹೊರಟರು   

ಬೆಳಕವಾಡಿ: ಸಮೀಪದ ಬೋಪ್ಪೇಗೌಡನಪುರ (ಬಿಜಿಪುರ) ಗ್ರಾಮದ ಮಂಟೇಸ್ವಾಮಿ ಮಠದ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದ ಚೆನ್ನರಾಜೇ ಅರಸು ಶನಿವಾರ ಚಿಕ್ಕಲ್ಲೂರು ಜಾತ್ರೆಗೆ ಪ್ರಯಾಣ ಹೊರಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಡಿನ ಜನತೆಗೆ ಹಾಗೂ ರೈತರಿಗೆ ಮಳೆ, ಬೆಳೆ ಚೆನ್ನಾಗಿ ಆಗಿ ಸಂತೋಷದಿಂದ ಇರಲಿ ಹಾಗೂ ಭಕ್ತರೆಲ್ಲರೂ ಜಾತ್ರೆಗೆ ಆಗಮಿಸಿ ಮಂಟೇಸ್ವಾಮಿ, ಸಿದ್ದಪ್ಪಾಜಿ ಆಶೀರ್ವಾದ ಪಡೆದುಕೊಳ್ಳಿರಿ ಎಂದು ಆಶಿಸಿದರು.

ಬೆಳಿಗ್ಗೆ ಸಂಪ್ರದಾಯದಂತೆ ಮಠದಲ್ಲಿ ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಐಕ್ಯವಾಗಿರುವ ಗದ್ದುಗೆಗೆ ಜ್ಞಾನಾನಂದ ಚೆನ್ನರಾಜೇ ಅರಸು ಪೂಜೆ ಸಲ್ಲಿಸಿದರು. ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಪಟ್ಟದ ಬಸವ ಜತೆಗೆ ಚಿಕ್ಕಲ್ಲೂರಿನಲ್ಲಿ 5 ದಿನಗಳ ಕಾಲ ನಡೆಯುವ ಸಿದ್ದಪ್ಪಾಜಿ ಜಾತ್ರೆಗೆ ಪೂಜಾ ಸಾಮಗ್ರಿಗಳೊಂದಿಗೆ ಛತ್ರಿ, ಚಾಮರ, ಕೊಂಬು, ಕಹಳೆ, ಪೆಂಜು, ತಮಟೆ ವಾದ್ಯಗಳೊಂದಿಗೆ ಮೂಗ ಮಾರಮ್ಮ ದೇವಸ್ಥಾನಕ್ಕೆ ತೆರಳಿ ಈಡಗಾಯಿ ಹೊಡೆದು ಮುಂದೆ ಮೆರವಣಿಗೆಯಲ್ಲಿ ಸಾಗಿದರು. ದೊಡ್ಡಮ್ಮ ತಾಯಿ ಕೆರೆಯ ಅರಳಿ ಮರದ ಬಳಿ ಮುಖಂಡರು ಬೀಳ್ಕೊಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.