ADVERTISEMENT

ಮಳವಳ್ಳಿಯಲ್ಲಿ ಮತ್ತೊಂದು ಪ್ರಕರಣ: 60 ವರ್ಷದ ವೃದ್ಧನಿಂದ ಬಾಲಕಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 5:27 IST
Last Updated 14 ಅಕ್ಟೋಬರ್ 2022, 5:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಮಳವಳ್ಳಿ ತಾಲ್ಲೂಕು ಹಲಗೂರು ಬಳಿಯ ಹಳ್ಳಿಯೊಂದರ ದಲಿತ ಬಾಲಕಿ ಮೇಲೆ 60 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿಗೆ ತಂದೆ ಇಲ್ಲ, ತಾಯಿಯು ಮಗಳನ್ನು ಅಜ್ಜಿ–ತಾತನ ಮನೆಯಲ್ಲಿ ಬಿಟ್ಟು ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಸರ್ಕಾರಿ ಶಾಲೆಯಲ್ಲಿ ಬಾಲಕಿ 10ನೇ ತರಗತಿ ಓದುತ್ತಿದ್ದಳು.

ಅ.6ರಂದು ಬಾಲಕಿಯು ಅಜ್ಜಿ ಜೊತೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದಳು. ಇದನ್ನೇ ದುರುಪಯೋಗ ಮಾಡಿ ಕೊಂಡ ಆರೋಪಿ ಬಾಲಕಿಗೆ ಊಟ, ತಿಂಡಿ ಕೊಡಿಸಿ ಸಮೀಪದಲ್ಲೇ ಇದ್ದ ಬಸವನಬೆಟ್ಟದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.

ADVERTISEMENT

ನಂತರ ಅ.7ರಂದು ವಾಪಸ್‌ ಕರೆತಂದು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಿ ಮತ್ತೆ ಅತ್ಯಾಚಾರ ಎಸಗಿದ್ದಾನೆ. ನಂತರ ಅಜ್ಜಿ ಮನೆಗೆ ಬಾಲಕಿಯನ್ನು ತಂದು ಬಿಟ್ಟಿದ್ದಾನೆ. ಆಕೆಯ ಅಜ್ಜಿ, ಅಕ್ಕ ಎಲ್ಲಿಗೆ ಹೋಗಿದ್ದೆ ಎಂದು ವಿಚಾರಿಸಿದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ.

ಅ.8ರಂದು ಊರ ಮುಖಂಡರ ಜೊತೆ ತೆರಳಿ ಬಾಲಕಿಯ ಚಿಕ್ಕಪ್ಪ ಹಲಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೊ ಅಡಿ ಪ್ರಕರಣ ದಾಖಲು ಮಾಡಿ ಕೊಂಡಿರುವ ಪೊಲೀಸರು ಆರೋಪಿ ಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.