ADVERTISEMENT

ಚಿತ್ರಗಳು | ಮಂಡ್ಯ ಲಾಕ್‌ಡೌನ್‌: ಗುರುವಾರ ಖರೀದಿಗೆ ಅವಕಾಶ, ಮುಗಿಬಿದ್ದ ಜನ

ಮಂಡ್ಯದಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣ ಲಾಕ್‌ಡೌನ್ ಇತ್ತು. ಗುರುವಾರ ಬೆಳಿಗ್ಗೆ 6ರಿಂದ 10ರವರೆಗೆ ಖರೀದಿಗೆ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದರು. ಎಲ್ಲೆಲ್ಲೂ ಜನಜಂಗುಳಿ ಇತ್ತು. ಮಾಂಸ, ಚಿಕನ್ ಅಂಗಡಿಗಳ ಮುಂದೆ ಉದ್ದದ ಸಾಲು ಇತ್ತು.ಕಟ್ಟು ಕೊತ್ತಂಬರಿ ಬೆಲೆ ₹ 50ಕ್ಕೇರಿತ್ತು. ಬಾಡೂಟಕ್ಕೆ ಬಳಸುವ ಪುದೀನಾ, ಶುಂಠಿ, ಮಸಾಲ ಪದಾರ್ಥ ಖರೀದಿಗೆ ಬೇಡಿಕೆ ಹೆಚ್ಚಿತು. ಕೋವಿಡ್‌–19 ನಿಯಂತ್ರಣಕ್ಕಾಗಿ ಮುಂದಿನ 2 ದಿನ ಮತ್ತೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

​ಪ್ರಜಾವಾಣಿ ವಾರ್ತೆ
Published 27 ಮೇ 2021, 5:22 IST
Last Updated 27 ಮೇ 2021, 5:22 IST
ಮಾಂಸ ಮಾರಾಟದ ಅಂಗಡಿಗಳ ಮುಂದೆ ಉದ್ದದ ಸಾಲು ಇತ್ತು.
ಮಾಂಸ ಮಾರಾಟದ ಅಂಗಡಿಗಳ ಮುಂದೆ ಉದ್ದದ ಸಾಲು ಇತ್ತು.   
ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದರು.
ಮಂಡ್ಯದಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣ ಲಾಕ್‌ಡೌನ್ ಇತ್ತು. ಗುರುವಾರ ಬೆಳಿಗ್ಗೆ 6ರಿಂದ 10ರವರೆಗೆ ಖರೀದಿಗೆ ಅವಕಾಶ ನೀಡಲಾಗಿತ್ತು.
ಬಾಡೂಟಕ್ಕೆ ಬಳಸುವ ಪುದೀನಾ, ಶುಂಠಿ, ಮಸಾಲ ಪದಾರ್ಥ ಖರೀದಿಗೆ ಬೇಡಿಕೆ ಹೆಚ್ಚಿತು.
ಎಲ್ಲೆಲ್ಲೂ ಜನಜಂಗುಳಿ ಇತ್ತು
ಕೋವಿಡ್‌–19 ನಿಯಂತ್ರಣಕ್ಕಾಗಿ ಮುಂದಿನ 2 ದಿನ ಮತ್ತೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.