ಶ್ರೀರಂಗಪಟ್ಟಣ: ದಸರಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಚೆಸ್ ಅಕಾಡೆಮಿಯ ಸಹಯೋಗದಲ್ಲಿ ಭಾನುವಾರ ನಡೆದ ಚೆಸ್ ಟೂರ್ನಿಯಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ 150 ಮಂದಿ ಪಾಲ್ಗೊಂಡಿದ್ದರು.
ಇಲ್ಲಿನ ರಂಗನಾಥ ಕಲ್ಯಾಣ ಮಂಟಪದಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಮೈಸೂರು, ಚಾಮರಾಜನಗರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಸ್ಪರ್ಧಿಗಳು ಭಾಗವಹಿಸಿದ್ದರು. ಬಾಲಕ ಮತ್ತು ಬಾಲಕಿಯರಿಗೆ 9 ವರ್ಷದ ಒಳಗಿನ, 13 ವರ್ಷದ ಒಳಗಿನ ಮತ್ತು 16 ವರ್ಷದ ಒಳಗಿನವರ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಿತು.
ಬಾಲಕರ 9 ವರ್ಷದ ಒಳಗಿನವರ ಸ್ಪರ್ಧೆಯಲ್ಲಿ ಪರಿಹಾಸ್‌ರಾಜ್ ಪ್ರಥಮ, ಅಗಸ್ತ್ಯ ದ್ವಿತೀಯ, ಅದ್ವೈತ್ ನಾಗರಾಜ್ ಮುಧೋಳ್ ತೃತೀಯ; ಬಾಲಕಿಯರ ವಿಭಾಗದಲ್ಲಿ ದಿಶಾ ಎಂ.ಆರ್. ಪ್ರಥಮ, ಶಾನ್ವಿ ಕೆ.ಎನ್. ದ್ವಿತೀಯ ಹಾಗೂ ಆದ್ಯಾ ಎಸ್.ಕೆ. ತೃತೀಯ ಸ್ಥಾನ ಪಡೆದರು.
ಬಾಲಕರ 13 ವರ್ಷದ ಒಳಗಿನವರ ಟೂರ್ನಿಯಲ್ಲಿ ಮಿಲನ್ ಎಸ್. ಗೌಡ ಪ್ರಥಮ, ಚಿರಾಗ್ ಸಿ.ಎಸ್. ದ್ವಿತೀಯ, ದರ್ಶನ್ ಬಿ.ವಿ.ಎಸ್ ತೃತೀಯ; ಬಾಲಕಿಯರ ವಿಭಾಗದಲ್ಲಿ ಅನಾನ್ ಹೊತ್ತೂರ್ ಪ್ರಥಮ, ರುಚಿಕಾ ಶಿವಾನಂದ್ ದ್ವಿತೀಯ ಮತ್ತು ಹನ್ನಾ ಲೂಯಿಸ್ ತೃತೀಯ ಸ್ಥಾನ ಗಳಿಸಿದರು.
16 ವರ್ಷದ ಒಳಗಿನ ಬಾಲಕರ ಟೂರ್ನಿಯಲ್ಲಿ ಪ್ರತೀಶ್ ಕೆ.ಎಂ. ಪ್ರಥಮ, ಎಲ್ವಿಸ್ ಜಾರ್ಜ್ ಲೂಯಿಸ್ ದ್ವಿತೀಯ, ಕಿಶನ್. ಜೆ. ತೃತೀಯ; ಬಾಲಕಿಯರ ವಿಭಾಗದಲ್ಲಿ ಜಾನವಿ ಎಂ.ಎಸ್. ಪ್ರಥಮ, ಅಲ್ಮಾಸ್ ಬಾನೋ ದ್ವಿತೀಯ ಹಾಗೂ ಉಮ್ರಾ ಖಾನುಂ ಮೂರನೇ ಸ್ಥಾನ ಪಡೆದರು. ಮಂಡ್ಯ ಚೆಸ್ ಅಕಾಡೆಮಿ ಸಂಸ್ಥಾಪಕ ಮಂಜುನಾಥ ಜೈನ್, ಸಹ ಸಂಸ್ಥಾಪಕಿ ಮಾಧುರಿ, ಮುಖ್ಯ ಆರ್ಬಿಟರ್ ಧನುಷ್ ಅವರ ತಂಡ ಚೆಸ್ ಟೂರ್ನಿ ನಡೆಸಿಕೊಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.