ADVERTISEMENT

ದಟ್ಟ ಮಂಜು: ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 12:55 IST
Last Updated 10 ಡಿಸೆಂಬರ್ 2024, 12:55 IST
ಬೆಳಕವಾಡಿಯಲ್ಲಿ ಮಂಗಳವಾರ ಬೆಳಿಗ್ಗೆ ದಟ್ಟವಾಗಿ ಕವಿದಿದ್ದ ಮಂಜು
ಬೆಳಕವಾಡಿಯಲ್ಲಿ ಮಂಗಳವಾರ ಬೆಳಿಗ್ಗೆ ದಟ್ಟವಾಗಿ ಕವಿದಿದ್ದ ಮಂಜು   

ಬೆಳಕವಾಡಿ: ಬೆಳಕವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ದಟ್ಟ ಮಂಜು ಆವರಿಸಿ ಜನರು ಪರದಾಡಿದರು.

ಬೋಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಬೆಳಕವಾಡಿ, ಹೊಸಹಳ್ಳಿ, ಜವನಗಹಳ್ಳಿ, ಕಿರಗಸೂರು, ಅಂತರಾಯನಪುರ ದೊಡ್ಡಿ, ವಾಸುವಳ್ಳಿ, ದ್ಯಾವಪಟ್ಟಣ, ಕಗ್ಗಲೀಪುರ, ಮುಟ್ಟನಹಳ್ಳಿ, ಪೂರಿಗಾಲಿ, ಸರಗೂರು ಸೇರಿದಂತೆ ವಿವಿಧೆಡೆ ಬೆಳಿಗ್ಗೆ 7ರಿಂದ 9ರವರೆಗೂ ಸೂರ್ಯನ ದರ್ಶನವಾಗಿರಲಿಲ್ಲ.

ಹಾಲು ಹಾಗೂ ದಿನಪತ್ರಿಕೆ ವಿತರಕರು, ಹಾಲು ಉತ್ಪಾದಕರು, ವಾಯು ವಿಹಾರ, ಕೂಲಿ ಕೆಲಸಕ್ಕೆ ಹೋಗುವ ಜನರು ಹಾಗೂ ಪಟ್ಟಣದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಪರದಾಡಿದರು, ವಾಹನ ಸವಾರರಿಗೆ ಲೈಟ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.