
ಕಿಕ್ಕೇರಿ: ಪಟ್ಟಣದ ಕುರುಹಿನಶೆಟ್ಟಿ ಸಮಾಜ ಭವನದಲ್ಲಿನ ಸಿದ್ಧಾರೂಢಸ್ವಾಮಿ ಮಠದಲ್ಲಿ ಸೋಮವಾರ ಧನುರ್ಮಾಸ ವಿಶೇಷ ಪೂಜೆ ನೆರವೇರಿಸಲಾಯಿತು.
ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಮಾತನಾಡಿ, ‘ಪವಾಡ ಪುರುಷ ಸಿದ್ಧಾರೂಢರು ನಡೆದಾಡಿದ ಕ್ಷೇತ್ರ ಇದಾಗಿದೆ. ಮನಸ್ಸಿನ ಕಲ್ಮಶ ತೊಳೆದು ಶಾಂತಿ ನೆಮ್ಮದಿ ಸಿಗಲಿದೆ. ಧನುರ್ಮಾಸ ದೇವರನ್ನು ಒಲಿಸಿಕೊಳ್ಳುವ, ಆರಾಧಿಸುವ ಪುಣ್ಯಕಾಲವಾಗಿದೆ. ಇದೇ ಭಗವಂತನ ಆರಾಧನೆಗೆ ಬೇಕಿರುವ ಪೂಜೆ’ ಎಂದರು.
ಸಿದ್ಧಾರೂಢರ ಭಾವಚಿತ್ರಕ್ಕೆ ಪುಷ್ಪಮಾಲೆಗಳಿಂದ ಸಿಂಗರಿಸಿ, ಧೂಪ, ದೀಪಧಾರತಿ ಬೆಳಗಲಾಯಿತು. ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.
ಮುಖಂಡರಾದ ಮಾದೇಗೌಡ, ಕೃಷ್ಣಶೆಟ್ಟಿ, ಬಾಲಣ್ಣ, ವಿನೂತ, ಗಾಯಿತ್ರಿ, ಲೀಲಾವತಿ, ಸಾವಿತ್ರಮ್ಮ, ಭಾರತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.