ADVERTISEMENT

ಡಾ.ಯತೀಂದ್ರ ಜನರ ಕ್ಷಮೆ ಕೇಳಲಿ: ವೆಂಕಟಗಿರಿಯಯ್ಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:04 IST
Last Updated 31 ಜುಲೈ 2025, 5:04 IST
ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ   

ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡುವ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಅವರ ಹೇಳಿಕೆ ಅವಹೇಳನಕರವಾಗಿದ್ದು, ಅವರು ಜನರ ಕ್ಷಮೆ ಕೇಳಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ನಮ್ಮ ನಾಲ್ವಡಿ ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರಲ್ಲಿ ಅಗ್ರಗಣ್ಯರು. ಸಿದ್ದರಾಮಯ್ಯ ಅವರನ್ನು ನಾಲ್ವಡಿ ಅವರಿಗೆ ಹೋಲಿಸಿರುವುದು ಸಮಾಜ ದ್ರೋಹದ ಕೃತ್ಯ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಡಿ.ದೇವರಾಜ ಅರಸು ಅವರಿಗೂ ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡಿ, ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ. ಇದೀಗ ಪರಿಶಿಷ್ಟ ಸಮುದಾಯಕ್ಕೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಇತರೆ ಯೋಜನೆಗಳಗೆ ಬಳಸಿ ಅನ್ಯಾಯ  ಮಾಡಿರುವ ಸಿದ್ದರಾಮಯ್ಯ ಎಲ್ಲಿ, ಜನರಿಗಾಗಿ ಸೇವೆ ಮಾಡಿದ ಡಿ.ದೇವರಾಜ ಅರಸು ಎಲ್ಲಿ ಎಂದು ಕಿಡಿಕಾರಿದರು.

ADVERTISEMENT

ಡಿಎಸ್‌ಎಸ್‌ ಮುಖಂಡರಾದ ಆನಂದ್, ಶರಾವತಿ, ಮುತ್ತುರಾಜ್‌, ಪುಟ್ಟಲಿಂಗಯ್ಯ, ಮಹದೇವು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.