ಹಲಗೂರು: ಸಮೀಪದ ಅಂತರವಳ್ಳಿಯ ಸರ್ವೇ ನಂ. 83, 84, 88, 89ರಲ್ಲಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಹಳ್ಳವನ್ನು ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಿದರು.
ಅರ್ಜಿದಾರ ಮನು ಎಂಬುವವರು ಮಳವಳ್ಳಿ ತಹಶೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದ್ದರು.
ಈ ಸಂಬಂಧ ಉನ್ನತ ಅಧಿಕಾರಿಗಳ ಅದೇಶದ ಮೇರೆಗೆ ಕಸಬಾ 3ನೇ ವೃತ್ತದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಶಿವಕುಮಾರ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಾಲ್ಲೂಕು ಸರ್ವೇಯರ್ ಎಂ.ಎಸ್. ಬೀರೇಶ್ ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಸರ್ಕಾರಿ ಹಳ್ಳದ ಜಾಗವನ್ನು ಗುರುತಿಸಿದರು. ಎಎಸ್ಐ ಗಳಾದ ರಮೇಶ್, ಶಿವಣ್ಣ ಮತ್ತು ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಸದರಿ ಸರ್ಕಾರಿ ಹಳ್ಳವನ್ನು ತೆರವು ಗೊಳಿಸಲಾಯಿತು.
ಗ್ರಾಮ ಸಹಾಯಕ ಎ.ಎಸ್.ಶಿವಕುಮಾರ್, ಗ್ರಾಮಸ್ಥರಾದ ರಾಜೇಗೌಡ, ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.