
ಮೇಲುಕೋಟೆ: ಹೋಬಳಿಯ ಸುಂಕಾತೊಣ್ಣೂರು ಗ್ರಾಮದಲ್ಲಿ ಭಾನುವಾರ ಬೇಟೆ ತಿಮ್ಮನಕೊಪ್ಪಲು ಗ್ರಾಮದ ರಾಧಮ್ಮ ದಾಸೇಗೌಡ ಸ್ಮರಣಾರ್ಥ ಶ್ರವಣದೋಷ ಉಚಿತ ಚಿಕಿತ್ಸಾ ಶಿಬಿರ ಮತ್ತು ಉಚಿತ ಶ್ರವಣ ಯಂತ್ರ ಹಸ್ತಾಂತರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇಎನ್‌ಟಿ ತಜ್ಞ ವೈದ್ಯ ಬಿ.ಡಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಉದ್ಯಮಿ ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷರಾದ ದೇವೇಗೌಡ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶಿವಕುಮಾರ್ ಮಾತನಾಡಿ, ‘ನಗರ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಬಹುತೇಕ ವೈದ್ಯರು ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದು ತುಂಬಾ ಕಡಿಮೆ, ಇಂತಹ ದಿನಮಾನಗಳಲ್ಲಿ ಡಾ.ಬಿ.ಡಿ.ಕೃಷ್ಣಪ್ಪ ಅವರು ವೈದ್ಯರಾದ ತಮ್ಮ ಪತ್ನಿ, ಪುತ್ರ ಮತ್ತು ಸೊಸೆಯವರ ತಂಡದೊಂದಿಗೆ ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಿರುವುದಲ್ಲದೇ, ಶ್ರವಣದೋಷವುಳ್ಳವರಿಗೆ ಉಚಿತವಾಗಿ ಬೆಲೆ ಬಾಳುವ ಶ್ರವಣ ಯಂತ್ರಗಳನ್ನು ಹಸ್ತಾಂತರಿಸಿರುವುದು ಸ್ವಾಗತಾರ್ಹ’ ಎಂದರು. ವೈದ್ಯರ ಹಿರಿಯ ಸಹೋದರ ಬಿ.ಡಿ.ಶ್ರೀನಿವಾಸೇಗೌಡ ಅವರನ್ನು ಗ್ರಾಮದ ಪರವಾಗಿ ಸನ್ಮಾನಿಸಿದರು.
ಗ್ರಾಮದ ಸುಮಾರು 250ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು, ವಿಶೇಷ ಚೇತನರು, ವಯೋವೃದ್ಧರಾದಿಯಾಗಿ ಎಲ್ಲರೂ ತಪಾಸಣೆಗೆ ಒಳಗಾಗಿ ಉಚಿತವಾಗಿ ಔಷಧಿಗಳನ್ನು ಪಡೆದರು. ಜತೆಗೆ 5 ಫಲಾನುಭವಿಗಳಿಗೆ ಸ್ಥಳದಲ್ಲೇ ಉಚಿತವಾಗಿ ಶ್ರವಣ ಯಂತ್ರ ಹಸ್ತಾಂತರ ಮಾಡಲಾಯಿತು. ಉಳಿದವರ ಹೆಸರುಗಳನ್ನು ನೋಂದಣಿ ಮಾಡಿದ್ದು, ಶೀಘ್ರದಲ್ಲೇ ಅವರಿಗೂ ಉಚಿತವಾಗಿ ಶ್ರವಣ ಯಂತ್ರ ವಿತರಣೆ ಮಾಡಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವೇಗೌಡ, ಡಾ.ಬಿ.ಡಿ.ಕೃಷ್ಣಪ್ಪ, ಡಾ.ಪಿ.ಮಂಜುಳಾ, ಡಾ.ಬಿ.ಕೆ.ಅಕ್ಷಯ್, ಡಾ.ಸ್ವಾತಿ, ಬಿ.ಡಿ.ಶ್ರೀನಿವಾಸೇಗೌಡ, ಬಿ.ಡಿ.ರಾಜೇಂದ್ರ, ಬಿ.ಡಿ.ಲೋಕೇಶ್, ಬಿ.ಡಿ.ಚಂದ್ರಕಾಂತ್, ಡಿ.ಧನಂಜಯ್ಯ, ಎಸ್‌ಡಿಎಂಸಿ ಅಧ್ಯಕ್ಷರಾದ ನಟರಾಜ್, ಡೇರಿ ಅಧ್ಯಕ್ಷ ಮಹೇಶ್, ವಿ.ಎಸ್.ಎಸ್.ಎನ್.ಅಧ್ಯಕ್ಷ ಮಹೇಶ್, ನಿರ್ದೇಶಕ ಪಾರ್ಥಸಾರಥಿ, ಪಿಡಿಒ ಮಹದೇವ, ರೈತ ಮುಖಂಡರಾದ ಆನಂದ್, ಶಿಕ್ಷಕ ಶಿವಯ್ಯ ಪಾಲ್ಗೊಂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.