
ಹಲಗೂರು: ಮನೆಯ ಮುಂಬಾಗಿಲಿಗೆ ಚಿಲಕ ಹಾಕಿ ಮಗುವನ್ನು ಶಾಲೆಯಿಂದ ಕರೆತರಲು ಹೋದ ಸಂದರ್ಭದಲ್ಲಿ 93 ಗ್ರಾಂ ಚಿನ್ನಾಭರಣ ಹಾಗೂ ₹6ಸಾವಿರ ನಗದು ಕದ್ದೊಯ್ದ ಘಟನೆ ಹಲಗೂರು ಇಂದಿರಾ ಕಾಲೊನಿಯಲ್ಲಿ ಶುಕ್ರವಾರ ನಡೆದಿದೆ.
ಮುತ್ತುರಾಜು ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅವರ ಪತ್ನಿ ಪೂಜಾ ಶಾಲೆಯಿಂದ ಮಗುವನ್ನು ಕರೆದುಕೊಂಡು ಬರುವ ವೇಳೆಗೆ ಘಟನೆ ನಡೆದಿದೆ. ಕಳ್ಳತನ ನಡೆಯುವ ವೇಳೆ ಪೂಜಾ ಮನೆಗೆ ಹಿಂದುರುಗಿ ಬಂದಾಗ ಬಾಗಿಲ ಹಿಂಬದಿಯಲ್ಲಿ ಅಡಗಿ ಕುಳಿತ್ತಿದ್ದ ಕಳ್ಳ ಪೂಜಾ ಅವರನ್ನು ಮನೆಯೊಳಗೆ ತಳ್ಳಿ ಮುಂದಿನ ಬಾಗಿಲ ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾನೆ.
ಮಳವಳ್ಳಿ ಉಪ ವಿಭಾಗದ ಡಿ.ವೈ.ಎಸ್.ಪಿ ಯಶವಂತ್ ಕುಮಾರ್, ಹಲಗೂರು ಸರ್ಕಲ್ ಇನ್ ಸ್ಪೆಕ್ಟರ್ ಬಿ.ಎಸ್.ಶ್ರೀಧರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.