ADVERTISEMENT

ಹಾಸನ ಒಕ್ಕೂಟದ 65ರ ವರದಿ ಪ್ರಕಟವಾದರೆ ರೇವಣ್ಣ ಸಿಕ್ಕಿ ಬೀಳುತ್ತಾರೆ: ಮಂಜು

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:50 IST
Last Updated 24 ಜೂನ್ 2021, 5:50 IST
ಶ್ರೀರಂಗಪಟ್ಟಣ ತಾಲ್ಲೂಕು ದೊಡ್ಡಪಾಳ್ಯ ಗ್ರಾಮಸ್ಥರು ಅರಕೆರೆ ಸೆಸ್ಕ್‌ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಸೆಸ್ಕ್‌ ಸಹಾಯಕ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು
ಶ್ರೀರಂಗಪಟ್ಟಣ ತಾಲ್ಲೂಕು ದೊಡ್ಡಪಾಳ್ಯ ಗ್ರಾಮಸ್ಥರು ಅರಕೆರೆ ಸೆಸ್ಕ್‌ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಸೆಸ್ಕ್‌ ಸಹಾಯಕ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು   

ಮಂಡ್ಯ: ‘ಹಾಸನ, ಮಂಡ್ಯದ ಹಾಲು ಒಕ್ಕೂಟಗಳು ದೇವೇಗೌಡರ ಕುಟುಂಬದ ಸ್ವತ್ತಾಗಿತ್ತು. ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅದನ್ನು ತಪ್ಪಿಸಿ, ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದ್ದೆ. ಆದರೆ, ಈಗ ಮತ್ತೆ ಅವರ ಹಿಡಿತದಲ್ಲೇ ಇದ್ದು, ಹಾಸನ ಒಕ್ಕೂಟದ 65ರ ವರದಿ ಪ್ರಕಟವಾದರೆ ಎಚ್‌.ಡಿ.ರೇವಣ್ಣ ಹಗರಣದಲ್ಲಿ ಸಿಕ್ಕಿ ಬೀಳುತ್ತಾರೆ’ ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.

ಬುಧವಾರ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ‘ಮಂಡ್ಯ, ಹಾಸನದಲ್ಲಿ ಯಾವುದೇ ಚುನಾವಣೆ ನಡೆಯದೆ ಸಂಘಗ ಳನ್ನು ಹಿಡಿತದಲ್ಲಿ ಇಟ್ಟುಕೊಂಡು, ಹಾಲಿಗೆ ನೀರು ಮಿಶ್ರಣ ಮಾಡಿ ಮಾರಿದ್ದಾರೆ. ಮಂಡ್ಯದಲ್ಲಿ ನಡೆದಂತೆಯೇ ಹಾಸನದಲ್ಲೂ ನಡೆಯುತ್ತಿದೆ. ಹಾಸನದಲ್ಲಿ 65ರ ತನಿಖೆ ವರದಿ ಪ್ರಕಟವಾಗದಂತೆ ಅದನ್ನು ತಡೆದಿದ್ದಾರೆ. ಅದು ಪ್ರಕಟವಾದರೆ ಸಿಕ್ಕಿ ಬೀಳುತ್ತಿದ್ದಾರೆ. ಕುಟುಂಬದವರು ಡೇರಿಯ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಏನೂ ಅನುಕೂಲ ಆಗುತ್ತಿಲ್ಲ’ ಎಂದು ಆರೋಪಿಸಿದರು.

‘ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ಹೀಗಾಗುತ್ತಿದೆ ಎಂದು ಹೇಳುತ್ತಾರೆ. ಎಲ್ಲಾ ಒಕ್ಕೂಟದಲ್ಲೂ ಹೀಗೆ ಆಗಿರುವುದು ಬೆಳಕಿಗೆ ಬರುತ್ತದೆ. ರೈತರು, ಒಕ್ಕೂಟ ಉಳಿಯುತ್ತದೆ. ಒಕ್ಕೂಟಗಳಲ್ಲಿ ತನಿಖೆ ಮಾಡಿಸಿ, ಒಕ್ಕೂಟ ರಕ್ಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.