ADVERTISEMENT

ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಿ: ತಹಶೀಲ್ದಾರ್ ಆದರ್ಶ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 11:41 IST
Last Updated 20 ಮಾರ್ಚ್ 2025, 11:41 IST
ನಾಗಮಂಗಲ ತಾಲ್ಲೂಕಿನ ಶೀರಾಪಟ್ಟಣ ಬಳಿಯ ಕೇಂದ್ರೀಯ ಯೋಗ ಮತ್ತು ‌ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ 11ನೇ ಅಂತರರಾಷ್ಟ್ರೀಯ ಯೋಗ 100ನೇ ದಿನದ ಕೌನ್ ಡೌನ್ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು
ನಾಗಮಂಗಲ ತಾಲ್ಲೂಕಿನ ಶೀರಾಪಟ್ಟಣ ಬಳಿಯ ಕೇಂದ್ರೀಯ ಯೋಗ ಮತ್ತು ‌ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ 11ನೇ ಅಂತರರಾಷ್ಟ್ರೀಯ ಯೋಗ 100ನೇ ದಿನದ ಕೌನ್ ಡೌನ್ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು   

ನಾಗಮಂಗಲ: ‘ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಯುವಕರು ದೈನಂದಿನ‌ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ’ ಎಂದು ತಹಶೀಲ್ದಾರ್ ಆದರ್ಶ್ ಸಲಹೆ ನೀಡಿದರು.

ತಾಲ್ಲೂಕಿನ ಶೀರಾಪಟ್ಟಣ ಬಳಿಯ ಕೇಂದ್ರೀಯ ಯೋಗ ಮತ್ತು ‌ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ 11 ನೇ ಅಂತರರಾಷ್ಟ್ರೀಯ ಯೋಗ 100ನೇ ದಿನದ ಕೌನ್ ಡೌನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರುತ್ತದೆ. ದೇಶದಲ್ಲಿ ಮಧುಮೇಹ ಮತ್ತು ಸ್ಥೂಲ ಕಾಯದ ಸಮಸ್ಯೆ ಹೆಚ್ಚಾಗುತ್ತಿದ್ದು, ಯೋಗವೇ ಉತ್ತಮ ಪರಿಹಾರವಾಗಿದೆ. ಆರೋಗ್ಯ ರಕ್ಷಿಸುವಲ್ಲಿ ಯೋಗ ಸಹಕಾರಿ’  ಎಂದರು.

ADVERTISEMENT

ಹಿರಿಯ ಯೋಗಪಟು ನಂಜೇಗೌಡ ಮಾತನಾಡಿ, ‘ಮನುಷ್ಯನಿಗೆ ಮನೋಬಲಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ವಯೋಸಹಜವಾಗಿ ದೈಹಿಕ ದೌರ್ಬಲ್ಯಗಳು ಉಂಟಾಗುತ್ತದೆ. ಅಂತ ಸಮಯದಲ್ಲಿ ಯೋಗದ ಅಭ್ಯಾಸದಿಂದ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಸ್ವಾಸ್ಥ್ಯ ಮಾರ್ಗ ಯೋಗ ಪ್ರತಿಷ್ಠಾನದ ಸ್ಥಾಪಕ ಲಕ್ಷ್ಮಣ್ ಜೀ ಮಾತನಾಡಿ, ‘ಯೋಗಾಭ್ಯಾಸ ಎಂದಿಗೂ ಒತ್ತಾಯವಾಗಬಾರದು. ಸ್ವಯಂ ಆಸಕ್ತಿಯಾಗಿಸಿಕೊಳ್ಳಬೇಕು’ ಎಂದು ಹೇಳಿದರು.

450ಕ್ಕೂ ಹೆಚ್ಚು ಯೋಗಾಸಕ್ತರು ಅಭ್ಯಾಸ ಮಾಡಿದರು. ನೋಡಲ್ ಅಧಿಕಾರಿ ವಾದಿರಾಜ್, ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಮ್ಮ‌ ಮಾಯಣ್ಣಗೌಡ, ಡಾ‌.ನಿತೇಶ್, ಡಾ.ನೂಜ್ಹತ್, ಡಾ‌.ಸಿಂಧುಶ್ರೀ, ಡಾ.ಕಾರ್ತಿಕ್, ಡಾ.ಪೂಜಾ, ಡಾ.ರಘುರಾಮ್, ಯೋಗ ತರಬೇತುದಾರ ಸಿದ್ದಪ್ಪ ನರಗಟ್ಟಿ, ಎಂಜಿನಿಯರ್ ನಾಗೇಶ್, ಕಚೇರಿ ಸಹಾಯಕರಾದ ಚೈತ್ರಾ, ಪ್ರಗತಿ, ಶಿವರಾಜು, ಯಶ್ವಂತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.