ADVERTISEMENT

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಹೆಚ್ಚಳ

ವಿವಿಧೆಡೆಯಿಂದ ಬರುತ್ತಿರುವ ಜನರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:58 IST
Last Updated 23 ಏಪ್ರಿಲ್ 2021, 4:58 IST
ಶ್ರೀರಂಗಪಟ್ಟಣದ ಸೋಪಾನಕಟ್ಟೆ ಬಳಿ ಕಾವೇರಿ ನದಿಯಲ್ಲಿ ತಮ್ಮ ಬಂಧುಗಳ ಅಸ್ಥಿ ವಿಸರ್ಜಿಸಲು ಗುರುವಾರ ಬಂದಿದ್ದ ಜನರು
ಶ್ರೀರಂಗಪಟ್ಟಣದ ಸೋಪಾನಕಟ್ಟೆ ಬಳಿ ಕಾವೇರಿ ನದಿಯಲ್ಲಿ ತಮ್ಮ ಬಂಧುಗಳ ಅಸ್ಥಿ ವಿಸರ್ಜಿಸಲು ಗುರುವಾರ ಬಂದಿದ್ದ ಜನರು   

ಶ್ರೀರಂಗಪಟ್ಟಣ: ಕೋವಿಡ್‌ನಿಂದ ಬೆಂಗಳೂರಿನಲ್ಲಿ ಮೃತಪಟ್ಟವರ ಅಸ್ಥಿಯನ್ನು ಪಟ್ಟಣದ ಕಾವೇರಿ ನದಿಯಲ್ಲಿ ತಂದು ವಿಸರ್ಜನೆ ಮಾಡಲಾಗುತ್ತಿದೆ.

ಮೂರು ದಿನಗಳಿಂದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಪ್ರಕ್ರಿಯೆ ಹೆಚ್ಚಾಗಿದೆ. ಪಟ್ಟಣದ ಸೋಪಾನಕಟ್ಟೆ ಮತ್ತು ಪಶ್ಚಿಮವಾಹಿನಿ ಬಳಿ, ಕಾವೇರಿ ನದಿಯಲ್ಲಿ ತಮ್ಮ ಬಂಧುಗಳ ಅಸ್ಥಿಯನ್ನು ವಿಸರ್ಜನೆ ಮಾಡುತ್ತಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಮೈಸೂರಿನಿಮದಲೂ ಅಸ್ಥಿ ವಿಸರ್ಜನೆಗೆ ಜನರು ಬರುತ್ತಿದ್ದಾರೆ.

ADVERTISEMENT

ವೈದಿಕರ ಹಿಂದೇಟು: ಬೆಂಗಳೂರಿ ನಿಂದ ಬಂದವರಿಂದ ಸೋಂಕು ಹರಡುವ ಭಯದಿಂದ ಅಸ್ಥಿ ವಿಸರ್ಜನೆಗೆ
ಕೆಲವು ವೈದಿಕರು ಹಿಂದೇಟು ಹಾಕುತ್ತಿದ್ದಾರೆ. ಅಸ್ಥಿ ವಿಸರ್ಜನೆ ವಿಧಿ, ವಿಧಾನಗಳನ್ನು ನೆರವೇರಿಸಲು ಒಪ್ಪುತ್ತಿಲ್ಲ. ಕೆಲವರು ವೈದಿಕರು ಕೇಳಿದಷ್ಟು ಹಣ ಕೊಟ್ಟು ಅಸ್ಥಿ ವಿಸರ್ಜನೆ ಕೈಂಕರ್ಯ ಪೂರೈಸಿ ಹೋಗುತ್ತಿದ್ದಾರೆ. ಮತ್ತೆ ಕೆಲವರು ತಾವೇ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡುತ್ತಿದ್ದಾರೆ.

‘ಏ.20ರಿಂದೀಚೆಗೆ ಈಚೆಗೆ ಪಟ್ಟಣ ಮತ್ತು ಆಸುಪಾಸಿನಲ್ಲಿ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಪ್ರಕ್ರಿಯೆಗಳು ಹೆಚ್ಚಿವೆ. 20ರಂದು ಒಂದೇ ದಿನ 60ಕ್ಕೂ ಹೆಚ್ಚು ಮಂದಿ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ತಮ್ಮ ಬಂಧುಗಳು ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಗುರುವಾರ 30ಕ್ಕೂ ಹೆಚ್ಚು ಮಂದಿ ಬೆಂಗಳೂರಿಗರು ಅಸ್ಥಿ ವಿಸರ್ಜನೆ ಮಾಡಿ ಹೋಗಿದ್ದಾರೆ’ ಎಂದು ಪಟ್ಟಣದ ವೈದಿಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.