
ಸಂತೇಬಾಚಹಳ್ಳಿ: ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಕಲಿಕಾ ಹಬ್ಬದ ಕಾರ್ಯಕ್ರಮ ಎಂದು ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಯಾತನಹಳ್ಳಿ ಮಂಜೇಗೌಡ ಹೇಳಿದರು.
ಸಂತೇಬಾಚಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲಿಕಾ ಹಬ್ಬ ಮಾಡಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದ್ದಾರೆ. ಗಟ್ಟಿಯಾಗಿ ಓದುವುದು, ಕಥೆಗಳನ್ನು ಓದಿಸುವುದು, ಸ್ವಾತಂತ್ರ್ಯವಾಗಿ ಬರೆಯುವುದು, ಸಂತೋಷದಯಕವಾಗಿ ಗಣಿತ ಕಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ತರಹದ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಪೋಷಕರು ಹಾಗೂ ಶಿಕ್ಷಕರು ಉತ್ತಮ ಬಾಂಧವ್ಯ ಹೊಂದಿದರೆ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ. ಸರ್ಕಾರಿ ಶಾಲೆಗಳನ್ನು ಸಂರಕ್ಷಣೆ ಮಾಡುವುದರಿಂದ ಮಕ್ಕಳು ವಿದ್ಯೆಗಾಗಿ ವಲಸೆ ಹೋಗುವುದನ್ನು ತಪ್ಪಿಸಬೇಕು’ ಎಂದರು.
ಪಿಡಿಒ ಯೋಗೇಶ್, ಮುಖ್ಯ ಶಿಕ್ಷಕ ಎಸ್.ಎನ್ ಸತೀಶ್, ಬಿಆರ್‌ಪಿ ಶ್ರೀಧರ್, ಸಿಆರ್‌ಪಿ ನಂದೀಶ್, ಗ್ರಾ.ಪಂ. ಸದಸ್ಯ ಮಂಜೇಗೌಡ, ಹರೀಶ್, ಪಶು ಆಸ್ಪತ್ರೆ ಗೋಪಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.