ADVERTISEMENT

ಅಮೆರಿಕದಲ್ಲಿ ಸದಾ ಕನ್ನಡ ಭಾಷೆ ಬೆಳಗಲಿ: ಎನ್‌.ಚಲುವರಾಯಸ್ವಾಮಿ

ಅಕ್ಕ 5ಕೆ ವಾಕಥಾನ್’ನಲ್ಲಿ ಹೆಜ್ಜೆ ಹಾಕಿದ ರಾಜಕಾರಣಿಗಳು, ಸ್ವಾಮೀಜಿಗಳು, ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:24 IST
Last Updated 20 ಅಕ್ಟೋಬರ್ 2025, 6:24 IST
ಮಂಡ್ಯ ನಗರದ ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ನಡೆದ ‘ಅಕ್ಕ 5ಕೆ ವಾಕಥಾನ್’ನಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಎನ್‌.ಚಲುವರಾಯಸ್ವಾಮಿ, ಸಿ.ಎಸ್‌.ಪುಟ್ಟರಾಜು, ಪಿ.ರವಿಕುಮಾರ್ ಅವರು ಹೆಜ್ಜೆ ಹಾಕಿದರು
ಮಂಡ್ಯ ನಗರದ ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ನಡೆದ ‘ಅಕ್ಕ 5ಕೆ ವಾಕಥಾನ್’ನಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಎನ್‌.ಚಲುವರಾಯಸ್ವಾಮಿ, ಸಿ.ಎಸ್‌.ಪುಟ್ಟರಾಜು, ಪಿ.ರವಿಕುಮಾರ್ ಅವರು ಹೆಜ್ಜೆ ಹಾಕಿದರು   

ಮಂಡ್ಯ: ‘ಅಮೆರಿಕದಲ್ಲಿ ಕನ್ನಡ ತೇರು ಎಳೆಯುತ್ತಿರುವ ‘ಅಕ್ಕ ಸಂಸ್ಥೆ’ಗೆ ಎಲ್ಲಾ ಸರ್ಕಾರಗಳು ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದು, ಅಮೆರಿಕಾದಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಭಾಷೆ ಬೆಳಗಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಶ್ಲಾಘಿಸಿದರು.

ನಗರದ ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ಅಮೆರಿಕದ ‘ಅಕ್ಕ’ ಸಂಸ್ಧೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ‘ಅಕ್ಕ 5ಕೆ ವಾಕಥಾನ್’ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು.

‘ಅಕ್ಕ’ ಸಂಸ್ಥೆಯು ಕನ್ನಡದ ಕೆಲಸ ಮಾಡುತ್ತಿರುವುದರಿಂದ ಸರ್ಕಾರ ಹಾಗೂ ಸ್ವಾಮೀಜಿಗಳ ಬೆಂಬಲವು ಸದಾಕಾಲ ಇರುತ್ತದೆ ಎಂಬುದನ್ನು ಇಲ್ಲಿ ಸೇರ್ಪಡೆಯಾಗಿರುವ ಜನರು ಮತ್ತು ಕನ್ನಡ ಅಭಿಮಾನಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಸರ್ಕಾರವಾಗಲಿ ಸಾರ್ವಜನಿಕರಾಗಲಿ ಒಂದು ಕಾರ್ಯಕ್ರಮವನ್ನು ಮಾಡಲು ಎಷ್ಟು ಶ್ರಮ ವಹಿಸಬೇಕಾಗುತ್ತದೆ. ಆದರೆ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಿ ಅಕ್ಕ ಸಂಸ್ಥೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಸ್ಮರಿಸಿದರು.

ADVERTISEMENT

‘ಸಂಸ್ಥೆಯ ಅಧ್ಯಕ್ಷ ಮಧುರಂಗಯ್ಯ ಅವರು ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ನೆಡೆಯುವ ಅಕ್ಕ ಒಕ್ಕೂಟ ಸಂಸ್ಥೆ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರು ತಮ್ಮ ಪೂರ್ವ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿಯೇ ಮುಗಿಸಿದ್ದು ಕರ್ನಾಟಕಕ್ಕೆ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಮೆಚ್ಚುವ ಕೆಲಸ’ ಎಂದರು.

ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಮಾತನಾಡಿ, ‘20 ವರ್ಷಗಳಿಂದ ನಾವೆಲ್ಲರೂ ಅಮೇರಿಕದಲ್ಲಿ ಅಕ್ಕ ಸಂಸ್ಥೆ ಆಯೋಜಿಸುವ ಕನ್ನಡ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ. ಮಧುರಂಗಯ್ಯ ಅವರ ಸಾರಥ್ಯದಲ್ಲಿ ಅಕ್ಕ ಸಮ್ಮೇಳನದ ಕುರಿತು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲು ವಾಕಥಾನ್ ನಡೆಸುತ್ತಿದೆ’ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕ ಪಿ.ರವಿಕುಮಾರ್, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಮನ್‌ಮುಲ್‌ ನಿರ್ದೇಶಕ ಬಿ.ಆರ್‌.ರಾಮಚಂದ್ರು, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,  ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್ ಭಾಗವಹಿಸಿದ್ದರು.

‘ಹುಟ್ಟಿದ ಊರನ್ನು ಮರೆಯದಿರಿ’

ಹುಟ್ಟಿದ ಊರನ್ನು ಮರೆಯಬಾರದು ನಮ್ಮ ಊರು ನಮ್ಮ ದಾರಿ ಎಂಬ ಕಾರ್ಯಕ್ರಮವನ್ನು ಮಧುರಂಗಯ್ಯ ಅವರು ಮಂಡ್ಯದಲ್ಲಿ ಆಯೋಜಿಸಿದ್ದಾರೆ. ನಾವು ಎಷ್ಟೇ ಬೆಳೆದರು ನಮ್ಮ ಊರಿಗೆ ಕಿಂಚಿತ್ತಾದರೂ ಸೇವೆ ಮಾಡುವ ಉದ್ದೇಶ ಇಟ್ಟುಕೊಂಡಿರುವುದು ಇತರರಿಗೂ ಪ್ರೇರಣೆ’ ಎಂದು ಚಲನಚಿತ್ರ ನಟ ಪ್ರೇಮ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.