ADVERTISEMENT

ಬೆಳೆ ನಷ್ಟ| ಪರಿಹಾರಕ್ಕಾಗಿ ₹8,500 ಕೋಟಿ ಕೊಡಿಸಲಿ: ಎನ್‌.ಚಲುವರಾಯಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 20:18 IST
Last Updated 19 ಅಕ್ಟೋಬರ್ 2025, 20:18 IST
ಎನ್‌.ಚಲುವರಾಯಸ್ವಾಮಿ
ಎನ್‌.ಚಲುವರಾಯಸ್ವಾಮಿ   

ಮಂಡ್ಯ: ‘ರಾಜ್ಯದಲ್ಲಿ 14 ಲಕ್ಷ ಹೆಕ್ಟೇರ್‌ ಬೆಳೆ ನಷ್ಟವಾಗಿದೆ. 15 ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದೆ. ಎನ್‌ಡಿಆರ್‌ಫ್‌ ನಿಗದಿಪಡಿಸಿದ್ದಕ್ಕಿಂತಲೂ ₹8,500 ಕೋಟಿ ಹೆಚ್ಚುವರಿ ಬೇಕಿದ್ದು, ಕೇಂದ್ರ ಸಚಿವರು ಮತ್ತು ಸಂಸದರು ದನಿ ಎತ್ತಬೇಕು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಒತ್ತಾಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ರಸಗೊಬ್ಬರ ಕೊರತೆಯಾದಾಗ ಎಚ್‌ಡಿಕೆಗೆ ಪತ್ರ ಬರೆದಿದ್ದೆ. ಕೊಡಿಸಲಿಲ್ಲ. ಕೇಂದ್ರ ಮಂತ್ರಿಯಾಗಿ ಅವರ ಕೊಡುಗೆ ಏನು?  ಅವರಿಂದ ರಾಜ್ಯಕ್ಕೆ ಒಂದೇ ಒಂದು ರೂಪಾಯಿಯ ಉಪಯೋಗವೂ ಆಗಿಲ್ಲ’ ಎಂದು ಆರೋಪಿಸಿದರು. 

‘ಆರು ತಿಂಗಳು, ವರ್ಷಕ್ಕೆ ಬರುವ ಸಂಸದ ಎಚ್‌.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ. ಸಂಸದರ ಅನುದಾನ ಎಲ್ಲರಿಗೂ ಬಂದಿದೆ. ಅದನ್ನೇ ಸಾಧನೆ ಎಂಬಂತೆ ಬಿಂಬಿಸುವುದು  ದೊಡ್ಡಸ್ತಿಕೆಯಲ್ಲ. ವಿಶೇಷ ಅನುದಾನ ತಂದಿದ್ದರೆ ಅದು ಸಾಧನೆ ಆಗುತ್ತಿತ್ತು’ ಎಂದು ಟೀಕಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.