
ಹಲಗೂರು: ‘ಕರ್ನಾಟಕ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಪರಂಪರೆಯನ್ನು ಹೊಂದಿದ ನೆಲವಾಗಿದ್ದು, ಕನ್ನಡ ನಾಡು ನುಡಿಯ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಬೇಕಿದೆ’ ಎಂದು ನವ ಕರ್ನಾಟಕ ಯುವಶಕ್ತಿ ತಾಲ್ಲೂಕು ಘಟಕದ ಅಧ್ಯಕ್ಷ ನಂದೀಪುರ ಕುಮಾರ್ ತಿಳಿಸಿದರು.
ಹಲಗೂರು ಸಮೀಪದ ಕರಲಕಟ್ಟೆ ಗೇಟ್ ಬಳಿಯ ಶಂಕರ್ ನಾಗ್ ಆಟೊ ಚಾಲಕರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖಂಡರಾದ ಗೊಲ್ಲರಹಳ್ಳಿ ನಾಗೇಶ್ ಮಾತನಾಡಿ, ‘ಕನ್ನಡ ನಾಡು, ಜಲ, ನೆಲ ಹಾಗೂ ಭಾಷೆಯನ್ನು ಉಳಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಮಂದಿ ಕನ್ನಡ ಭಾಷೆಯನ್ನು ಬಳಕೆ ಮಾಡುತ್ತಿದ್ದು, ಕನ್ನಡ ಜೀವದ ಭಾಷೆ’ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕೃಷ್ಣೇಗೌಡನದೊಡ್ಡಿ ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದಿಂದ ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಜಾನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ತಾಯಿ ಮೆರವಣಿಗೆ ಮಾಡಲಾಯಿತು. ಆಟೋ ಚಾಲಕರ ಸಂಘದ ಹಿರಿಯ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.
ಮುಖಂಡರಾದ ಚಿಕ್ಕರಾಜು, ನವಕರ್ನಾಟಕ ಯುವ ಶಕ್ತಿ ತಾಲ್ಲೂಕು ಅಧ್ಯಕ್ಷ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಗಾಣಾಳು ಮಾದೇಶ್, ಅನಿಲ್, ಚನ್ನಮ್ಮ, ಮುಖಂಡರಾದ ಮಹೇಶ್, ಅಸ್ಗರ್ ಅಲಿ, ಜಗದೀಶ್, ಶಿಕ್ಷಕ ವಿಜಯ್ ಕುಮಾರ್, ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.