
ಅಂಚೆ ಇಲಾಖೆಯಿಂದ ಹೊರತಂದಿರುವ ಕೊಕ್ಕರೆ ಬೆಳ್ಳೂರು ಮುಖಚಿತ್ರದ ಅಂಚೆ ಲಕೋಟೆಯನ್ನು ಶಾಸಕ ಕೆ.ಎಂ.ಉದಯ್ ಬುಧವಾರ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಬಿಡುಗಡೆಗೊಳಿಸಿದರು.
ಮದ್ದೂರು: ‘ಕೊಕ್ಕರೆ ಬೆಳ್ಳೂರಿಗೆ ತನ್ನದೇ ಆದ ಇತಿಹಾಸ ಹಾಗೂ ವೈಶಿಷ್ಟತೆ ಇದ್ದು, ಅಂಚೆ ಇಲಾಖೆಯಿಂದ ಅದರ ಮುಖ ಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆಯಾಗಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿ’ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.
ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯಿತಿ ಕಟ್ಟಡದ ನವೀಕರಣ ಕಾಮಗಾರಿ, ಕೂಸಿನ ಮನೆ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯಿಂದ ಹೊರತಂದಿರುವ ಕೊಕ್ಕರೆ ಬೆಳ್ಳೂರು ಮುಖಚಿತ್ರದ ಅಂಚೆ ಲಕೋಟೆಯನ್ನು ಬಿಡುಡೆಗೊಳಸಿ ಅವರು ಮಾತನಾಡಿದರು.
‘ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ವಿವಿಧ ದೇಶಗಳಿಂದ ಪೆಲಿಕಾನ್ ಸೇರಿದಂತೆ ಹಲವಾರು ಬಗೆಯ ಕೊಕ್ಕರೆಗಳು, ಪಕ್ಷಿಗಳು ವಿದೇಶಗಳಿಂದ ಸಂತಾನೋತ್ಪತ್ತಿಗಾಗಿ ಬರುತ್ತವೆ. ಗ್ರಾಮಸ್ಥರಿಗೆ ಹಾಗೂ ವಲಸೆ ಬರುವ ಪಕ್ಷಿಗಳಿಗೂ ಅವಿನಾಭಾವ ಸಂಬಂಧವಿದೆ. ಮುಂದಿನ ದಿನಗಳಲ್ಲಿ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಇನ್ನಷ್ಟು ಹೆಚ್ಚಿನ ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಅಂಚೆ ಇಲಾಖೆ ಅಧೀಕ್ಷಕ ಎಂ.ಡಿ.ಆಕಾಶ್ ಮಾತನಾಡಿ, ‘ಇದು ಸಾಮಾನ್ಯ ಅಂಚೆ ಲಕೋಟೆಗಳಿಗಿಂತ ಭಿನ್ನವಾಗಿದ್ದು ಸಂಗ್ರಹಕಾರರಿಗೆ ಹೆಚ್ಚಿನ ಮೌಲ್ಯ ಹೊಂದಿದೆ. ಅಂಚೆ ಲಕೋಟೆ ಬಿಡುಗಡೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ ಮಾಡಲಾಗಿದೆ’ ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ಕೆಂಪರಾಜು, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಪಿಡಿಒ ಪ್ರಭಾಕರ್, ಅಂಚೆ ಇಲಾಖೆ ಸಹಾಯಕರಾದ ರಾಜು ಕಾಳೇಶ್ವರ, ಗ್ರಾ.ಪಂ. ಸದಸ್ಯರು, ಮುಖಂಡರಾದ ಮಾದೇಶ್, ಜೆ.ಸುರೇಶ್, ಶಿವಣ್ಣ, ಗುಜ್ಜೆಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.