ADVERTISEMENT

‘ ಶಿಕ್ಷಣ, ಸಂಘಟನೆಗೆ ಒತ್ತು ನೀಡಿ’

ಆದಿ ಜಾಂಬವ ಟ್ರಸ್ಟ್‌, ಮಾದಿಗರ ಅಭಿವೃದ್ಧಿ ಸಮಿತಿ; ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 3:12 IST
Last Updated 18 ಸೆಪ್ಟೆಂಬರ್ 2025, 3:12 IST
ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೇಲ್ ನ ಸಭಾಂಗಣದಲ್ಲಿ  ನಡೆದ  ಮಾದಿಗ ಸಮಾಜದ  ಸಮಾರಂಭದಲ್ಲಿ ಗಣ್ಯರು  ಪ್ರತಿಭಾ ಪುರಸ್ಕಾರ  ಮಾಡಿದರು.
ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೇಲ್ ನ ಸಭಾಂಗಣದಲ್ಲಿ  ನಡೆದ  ಮಾದಿಗ ಸಮಾಜದ  ಸಮಾರಂಭದಲ್ಲಿ ಗಣ್ಯರು  ಪ್ರತಿಭಾ ಪುರಸ್ಕಾರ  ಮಾಡಿದರು.   

ಕೆ.ಆರ್.ಪೇಟೆ: ‘ಆದಿ ಜಾಂಬವ ಮಾದಿಗರ ಸಮುದಾಯದ ಸ್ಥಿತಿಗತಿ ಬದಲಾಗದಿರುವುದಕ್ಕೆ ನಮ್ಮಲ್ಲಿನ ಅಜ್ಞಾನ ಮತ್ತು ಅಸಂಘಟನೆಯೇ ಕಾರಣವಾಗಿದೆ’ ಎಂದು ವಿಚಾರವಾದಿ ಅರಕಲವಾಡಿ ನಾಗೇಂದ್ರ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕಿನ ಮಾದಿಗರ ಕ್ಷೇಮಾಭಿವೃದ್ಧಿ ಸಮಿತಿ ಮತ್ತು ತೇಗನಹಳ್ಳಿಯ ಆದಿ ಜಾಂಬವ ಯುವ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್  ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ‘ಒಳ ಮೀಸಲಾತಿಯ ಮಹತ್ವ ಮತ್ತು ಶಿಕ್ಷಣದ ಮೂಲಕ ನಿರುದ್ಯೋಗ ಹೋಗಲಾಡಿಸುವುದು ಹೇಗೆ’ ಎಂಬ ವಿಚಾರ ಸಂಕಿರಣದಲ್ಲಿ  ಅವರು ಮಾತನಾಡಿದರು.

‘ಸಂವಿಧಾನದ ಆಶಯಗಳು ಇಂದಿಗೂ ಸಮರ್ಥವಾಗಿ ಜಾರಿಯಾಗದಿರುವುದರಿಂದಲೇ ಒಳ ಮೀಸಲಾತಿಗಾಗಿ ಹೋರಾಟ ಅನಿವಾರ್ಯವಾಯಿತು. ಮಾದಿಗ ಸಮಾಜದವರು ಶಿಕ್ಷಣದ ಮಹತ್ವವನ್ನು ಅರಿತು ತಮ್ಮ ಮಕ್ಕಳನ್ನು  ವಿದ್ಯಾವಂತರನ್ನಾಗಿಸಬೇಕು. ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.

ADVERTISEMENT

ಮನ್ಮುಲ್ ನಿರ್ದೇಶಕ ಡಾಲು ರವಿ ಮತ್ತು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ  ಮಾತನಾಡಿ, ಮಾದಿಗ ಸಮುದಾಯದವರು ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚು ಒತ್ತು ನೀಡಿ, ಸರ್ಕಾರದ ಸವಲತ್ತು ಬಳಸಿಕೊಳ್ಳುವಂತೆ ತಿಳಿಸಿದರು.  ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಟಿ.ಸಿ ರಘು , ಪ್ರಾಧ್ಯಾಪಕ ಎಸ್.ಎಂ. ಮಂಜುನಾಥಸ್ವಾಮಿ , ಸುರೇಶ್ , ವಕೀಲ ಎಂ.ಕೆ.ಶಂಕರ್, ಉಪನ್ಯಾಸಕ ಎಂ.ಎಲ್.ವೆಂಕಟೇಶ್ , ಪ್ರಮುಖರಾದ ಆನಂದ್ , ನಾಗೇಶ್, ದಾಸಯ್ಯ , ಟಿ.ಜೆ.ಉಮೇಶ್, ವಿನೋದ್ ಕುಮಾರ್. ತೇಗನಹಳ್ಳಿ ಕರ್ಣ, ಮರಿಯಯ್ಯ, ಸತೀಶ್, ರಮೇಶ್, ಪ್ರಮೋದ, ಅರುಣ್ ಕುಮಾರ್, , ನಿತಿನ್, ಸೋಮಶೇಖರ್, ಮಾಜಿ ಸೈನಿಕ ಜಯರಾಮ್, ಸ್ಟುಡಿಯೋ ಜ್ಞಾನೇಶ್, , ಹರಿಹರಪುರ ಶಿವಕುಮಾರ್, ಬಿ.ಬಿ. ಕಾವಲು ಮೋಹನ್, ಹೊಸ ಹೊಳಲು ಮಂಜುನಾಥ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.