ADVERTISEMENT

ಕೆ.ಆರ್.ಪೇಟೆ: ಕೃಷ್ಣ ರಾಧೆ ವೇಷದಲ್ಲಿ ಗಮನಸೆಳೆದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 13:53 IST
Last Updated 6 ಸೆಪ್ಟೆಂಬರ್ 2023, 13:53 IST
ಕೆ.ಆರ್.ಪೇಟೆಯ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಕೃಷ್ಣ ರಾಧೆ ವೇಷ ಧರಿಸಿ ಗಮನಸೆಳೆದರು
ಕೆ.ಆರ್.ಪೇಟೆಯ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಕೃಷ್ಣ ರಾಧೆ ವೇಷ ಧರಿಸಿ ಗಮನಸೆಳೆದರು   

ಕೆ.ಆರ್.ಪೇಟೆ: ಪಟ್ಟಣದ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ–ರಾಧೆ ವೇಷಧಾರಿಗಳಾಗಿ ಗಮನಸೆಳೆದರು.

ಕೃಷ್ಣನ ಬಾಲ ಲೀಲೆಗಳು, ಲೋಕದ ರಕ್ಷಣೆಗಾಗಿ ದುಷ್ಟ ಸಂಹಾರ ಮಾಡಿದ ಬಗೆಯನ್ನು ಮಕ್ಕಳು ಪ್ರದರ್ಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾ ಅಧ್ಯಕ್ಷ ನಟರಾಜು ಮಾತನಾಡಿ, ‘ಕೃಷ್ಣ ಭಗವದ್ಗೀತೆಯಂತಹ ಗೀತೋಪದೇಶವನ್ನು ನೀಡಿದ್ದಾನೆ. ಸತ್ಯ, ಧರ್ಮ ರಕ್ಷಣೆಯೇ ಮೊದಲ ಆದ್ಯತೆಯಾಗಬೇಕೆಂದು ಸಾರಿದ್ದು, ಈ ಸಂದೇಶಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಉತ್ತಮ ವೇಷ ಧರಿಸಿದ ಮಕ್ಕಳು ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಶಿಕ್ಷಕರಿಗೆ ಬಹುಮಾನ ನೀಡಿ ಗೌರವಿಸಿದರು.

ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಎಸ್.ಬಿ. ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಪ್ರಗತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಂ.ಕೆ.ಮೋನಿಕಾ, ಶಿಕ್ಷಕರಾದ ಮಧು, ಅಂಬಿಕ, ಮಕ್ಕಳ ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.