ADVERTISEMENT

ಶ್ರೀರಂಗಪಟ್ಟಣ: ರಾಜಸ್ಥಾನ ಮೂಲದ ಕಾರ್ಮಿಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಮೇ 2020, 16:52 IST
Last Updated 10 ಮೇ 2020, 16:52 IST

ಶ್ರೀರಂಗಪಟ್ಟಣ: ಪಟ್ಟಣದ ಎಂ.ಕೆ. ಆಗ್ರೋಟೆಕ್‌ ಕಾರ್ಖಾನೆಯ ಸಮೀಪ ಕಾರ್ಮಿಕ ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಖಾನರಾಮ (35) ಆತ್ಮಹತ್ಯೆ ಮಡಿಕೊಂಡವರು.

ಇವರು ಮೂರು ತಿಂಗಳುಗಳಿಂದ ಎಂ.ಕೆ. ಆಗ್ರೋಟೆಕ್‌ ಕಾರ್ಖಾನೆಯಲ್ಲಿ ಮರಗೆಲಸ ಮಾಡುತ್ತಿದ್ದು, ಕಾರ್ಖಾನೆಯ ಕೊಠಡಿಯಲ್ಲೇ ಉಳಿದುಕೊಂಡಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಲಾಕ್‌ಡೌನ್‌ ಘೋಷಣೆಯಿಂದ ತಮ್ಮ ಊರಿಗೆ ಹೋಗಲು ಆಗದೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ADVERTISEMENT

ಸಿಗದ ಪಾಸ್‌: ಖಾನಾರಾಮ ಅವರ ಮೃತದೇಹವನ್ನು ರಾಜಸ್ಥಾನಕ್ಕೆ ಕೊಂಡೊಯ್ಯಲು ಭಾನುವಾರ ಸಂಜೆವರೆಗೂ ಪಾಸ್‌ ಸಿಕ್ಕಿರಲಿಲ್ಲ. ಕೊರೊನಾ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್‌ ಬಂದಿದ್ದರೂ ಎರಡೂ ರಾಜ್ಯಗಳ ನಿಯೋಜಿತ ನೋಡೆಲ್‌ ಅಧಿಕಾರಿಗಳ ಮಟ್ಟದಲ್ಲಿ ಸಂವಹನ ಕೊರತೆಯಿಂದ ಪಾಸ್‌ ಸಿಗುವುದು ತಡವಾಗಿದೆ ಎಂದು ಸಿಪಿಐ ಡಿ. ಯೋಗೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.