ADVERTISEMENT

ನಾಗಮೋಹನದಾಸ್‌ಗೆ ‘ಕಾನೂನು ಸೇವಾ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 15:26 IST
Last Updated 4 ಡಿಸೆಂಬರ್ 2024, 15:26 IST
ನ್ಯಾ.ಎಚ್.ಎನ್. ನಾಗಮೋಹನದಾಸ್
ನ್ಯಾ.ಎಚ್.ಎನ್. ನಾಗಮೋಹನದಾಸ್   

ಮಂಡ್ಯ: ‘ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ‘ಪ್ರಭಾವತಿ ಎಚ್‌.ಹನುಮೇಗೌಡ ಕಾನೂನು ಸೇವಾ ಪ್ರಶಸ್ತಿ’ಗೆ ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 20 ಸಾವಿರ ನಗದು ಒಳಗೊಂಡಿದೆ. ಡಿ.8ರಂದು ಪ್ರದಾನ ಮಾಡಲಾಗುವುದು’ ಎಂದು ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್‌ ಅವರನ್ನು ‘ಶಾರದಮ್ಮ ಎಂ.ಎಲ್‌.ಸುಬ್ಬಣ್ಣ ಕೃಷಿ ಪ್ರಶಸ್ತಿ’ಗೆ, ಮಂಡ್ಯ ತಾಲ್ಲೂಕಿನ ದೊಡ್ಡಬಾಣಸವಾಡಿ ಆಯುಷ್‌ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಂಬಿಕಾ ಅವರನ್ನು ‘ವೀಣಾ ಡಾ.ಎಂ.ಮಂಚಯ್ಯ ವೈದ್ಯಕೀಯ ಸೇವಾ ಪ್ರಶಸ್ತಿ’,ಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳೂ ತಲಾ ₹ 20 ಸಾವಿರ ನಗದು ಬಹುಮಾನ ಹೊಂದಿವೆ’ ಎಂದು ತಿಳಿಸಿದರು.

‘ಕನಕಪುರ ತಾಲ್ಲೂಕಿನ ಪ್ರಗತಿಪರ ಕೃಷಿಕ ಬಿ.ಕೆ.ಪದ್ಮಾ ಅವರನ್ನು ‘ರತ್ನಮ್ಮ ಕುನ್ನಮರಿಗೌಡ ಕೃಷಿ ಪ್ರಶಸ್ತಿ’ಗೆ ಹಾಗೂ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಪ್ರಗತಿಪರ ಕೃಷಿಕ ಪ್ರೊ.ಎಂ.ಸಿ. ಬೋರೇಗೌಡ ಅವರನ್ನು ‘ಡಾ.ಶಿವರಾಮಯ್ಯ ಕೃಷಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಇಬ್ಬರಿಗೂ ತಲಾ ₹ 10 ಸಾವಿರ ನಗದು ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಡಿ.8ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ನಡೆಯಲಿದೆ. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ವಕೀಲ ಪಿ.ಮಂಜುನಾಥ್‌ ಹಾಗೂ ಮಂಡ್ಯ ಕಾನೂನು ಕಾಲೇಜಿನ ವಿದ್ಯಾರ್ಥಿ ಜಿ.ಎಸ್‌. ಚೈತ್ರಾ ಆಯ್ಕೆಯಾಗಿದ್ದು, ತಲಾ ₹5 ಸಾವಿರದೊಂದಿಗೆ ಫಲಕ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಹೈಕೋರ್ಟ್‌ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಮ.ರಾಮಕೃಷ್ಣ ಅಭಿನಂದನಾ ನುಡಿಗಳನ್ನಾಡುವರು. ಅತಿಥಿಗಳಾಗಿ ಕನಕಪುರ ರೂರಲ್‌ ಎಜುಕೇಷನ್‌ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಪ್ರಭಾವತಿ ಹನುಮೇಗೌಡ ಭಾಗವಹಿಸುವರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.