ADVERTISEMENT

ಹಲಗೂರು: ಚಿರತೆ ದಾಳಿಗೆ ಮೇಕೆ ಸಾವು; ಹಸುವಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:49 IST
Last Updated 9 ಡಿಸೆಂಬರ್ 2025, 2:49 IST
ಚಿರತೆ ದಾಳಿಯಿಂದ ಗಾಯಗೊಂಡ ಹಸುವಿನೊಂದಿಗೆ ರೈತ ನಾಗೇಂದ್ರ
ಚಿರತೆ ದಾಳಿಯಿಂದ ಗಾಯಗೊಂಡ ಹಸುವಿನೊಂದಿಗೆ ರೈತ ನಾಗೇಂದ್ರ   

ಹಲಗೂರು: ಸಮೀಪದ ಹುಲ್ಲಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಒಂದು ಮೇಕೆ ಮೃತಪಟ್ಟಿದ್ದು, ಹಸು ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ ನಡೆದಿದೆ.

ಹಸು ಮತ್ತು ಮೇಕೆ ಸಾಕಾಣಿಕೆ ಮಾಡಿಕೊಂಡು ಜೀವನ ಜೀವನ ನಡೆಸುತ್ತಿದ್ದ ನಾಗೇಂದ್ರ ಅವರು ಮನೆಯ ಹಿಂದೆ ಇರುವ ದನದ ಕೊಟ್ಟಿಗೆಯಲ್ಲಿ ಹಸು ಮತ್ತು ಮೇಕೆಗಳನ್ನು ಕಟ್ಟಿದ್ದರು. ಸೋಮವಾರ ಬೆಳಿಗ್ಗೆ ಹಸುವಿನ ಕಾಲಿನ ಭಾಗದಲ್ಲಿ ರಕ್ತ ಸ್ರಾವ ಆಗುತ್ತಿರುವುದನ್ನು ಗಮನಿಸಿದ್ದಾರೆ. ಒಂದು ಮೇಕೆಯ ಕತ್ತಿನ ಭಾಗದಲ್ಲಿ ಚಿರತೆ ಕಚ್ಚಿದ್ದು, ಮೃತಪಟ್ಟಿದೆ. 

ಚಿರತೆ ದಾಳಿ ಕಂಡು ಗ್ರಾಮದ ಜನತೆ ಭಯ ಭೀತರಾಗಿದ್ದಾರೆ. ಕೂಡಲೇ ಸಂಬಂಧಿಸಿದ ಅರಣ್ಯ ಇಲಾಖೆಯವರು ಪಂಜರ ಇಟ್ಟು, ಚಿರತೆ ಸೆರೆಗೆ ಕ್ರಮವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.