
ಪ್ರಜಾವಾಣಿ ವಾರ್ತೆ
ಹಲಗೂರು: ಸಮೀಪದ ನಡಕಲಪುರ ಗ್ರಾಮದ ಚಿಕ್ಕಣ್ಣ ಎಂಬುವರ ತೋಟದಲ್ಲಿ ಓಡಾಡುತ್ತಿದ್ದ ಬೀದಿ ನಾಯಿಯೊಂದನ್ನು ಚಿರತೆ ಶುಕ್ರವಾರ ಬೆಳಿಗ್ಗೆ ಹಿಡಿದು ತಿಂದಿದೆ.
ತಮ್ಮ ಜಮೀನಿಗೆ ಹುಲ್ಲು ಕೊಯ್ಯಲು ಹೋಗಿದ್ದಾಗ ಚಿರತೆ ನಾಯಿಯನ್ನು ತಿನ್ನುತ್ತಿರುವುದನ್ನು ಚಿಕ್ಕಣ್ಣ ನೋಡಿದ್ದಾರೆ. ಚಿರತೆ ದಾಳಿ ಕಂಡು ರೈತರು ರಾತ್ರಿ ಸಮಯದಲ್ಲಿ ಜಮೀನಿಗೆ ತೆರಳಲು ಭಯ ಬೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಬೋನು ಇಟ್ಟು, ಚಿರತೆ ಸೆರೆಗೆ ಕ್ರಮವಹಿಸಬೇಕೆಂದು ಗ್ರಾಮದ ರೈತ ಚಿಕ್ಕಣ್ಣ ಒತ್ತಾಯಿಸಿದರು.
ಅರಣ್ಯ ಇಲಾಖೆ ಗಸ್ತು ಅರಣ್ಯ ಪಾಲಕರಾದ ವೈ.ಕೆ.ಸೌಮ್ಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಚಿರತೆ ಸೆರೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.