ADVERTISEMENT

ಪಾಂಡವಪುರ: ಯುವತಿ ಕರೆದೊಯ್ದಿದ್ದ ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:44 IST
Last Updated 19 ಜುಲೈ 2025, 4:44 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಪಾಂಡವಪುರ: ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಬಾಲಕಿಗೆ 18 ವರ್ಷ ತುಂಬುತ್ತಿದ್ದಂತೆ ಆಕೆಯನ್ನು ಪೋಷಕರಿಂದ ಬೇರ್ಪಡಿಸಿ ಕರೆದೊಯ್ದಿದ್ದ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಚಿನಕುರಳಿ ಗ್ರಾಮದ ಮುಜಾಸಿನ್ ಪಾಷ (27) ಬಂಧಿತ ಯುವಕ. ಅದೇ ಗ್ರಾಮದ ಬಾಲಕಿಯನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆಗೆ ಕಳೆದ ಏಪ‍್ರಿಲ್‌ನಲ್ಲಿ 18 ವರ್ಷ ತುಂಬಿದ್ದರಿಂದ ಇಬ್ಬರು ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದರು. ಇಬ್ಬರೂ ಜುಲೈ14ರಂದು ಜೊತೆಯಾಗಿ ನಾಪತ್ತೆಯಾಗಿದ್ದರು.

ಇತ್ತ ಮಗಳು ಕಾಣದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಜುಲೈ 15ರಂದು ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಸಿಕೊಂಡ ಪೊಲೀಸರು ಗುರುವಾರ ಇಬ್ಬರನ್ನೂ ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದರು. ಜತೆಗೆ ಇಬ್ಬರ ಕುಟುಂಬದವರನ್ನೂ ಠಾಣೆಗೆ ಕರೆಸಿದ್ದರು.

ಅದರೆ ಯುವತಿ ಪೋಷಕರ ಜೊತೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಸಾಂತ್ವನ ಕೇದ್ರಕ್ಕೆ ಕಳುಹಿಸಲಾಗಿದೆ. ಮುಜಾಸಿನ್ ಪಾಷಾ ಮೇಲೆ ಪೊಲೀಸರು ಫೋಕ್ಸೊ ಪ್ರಕರಣ ದಾಖಸಿ,  ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಕ್ಕೆ ಹಾಜರುಪಡಿಸಿದರು. ಬಂಧಿತನನ್ನು ಜುಲೈ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಲವ್ ಜಿಹಾದಿ ಆರೋಪ: ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮ ಪ್ರಕರಣವು ಲವ್ ಜಿಹಾದ್ ಆಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ವಿಶ್ವಹಿಂದೂ ಪರಿಷತ್, ಬಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಇನ್ಸ್‌ಪೆಕ್ಟರ್ ಶರತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.