ADVERTISEMENT

ಮದ್ದೂರು ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 16:21 IST
Last Updated 10 ಡಿಸೆಂಬರ್ 2024, 16:21 IST

ಮದ್ದೂರು: ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಹಲವು ಪ್ರಗತಿಪರ ಸಂಘಟನೆಗಳು ಬುಧವಾರ ಮದ್ದೂರು ಪಟ್ಟಣದಲ್ಲಿ ಸ್ವಪ್ರೇರಿತ ಬಂದ್‌ಗೆ ಕರೆನೀಡಿವೆ.

ಜಿಲ್ಲಾ ಕಿಸಾನ್ ಕಾಂಗ್ರೆಸ್‌, ವರ್ತಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಜಾಮಿಯಾ ಷಾದಿ ಕಮಿಟಿ, ಜೈನ ಸಮಾಜ, ಪಟೇಲ್ ಸಮಾಜ, ಸವಿತಾ ಸಮಾಜ, ದಲಿತ ಸಂಘಟನೆ, ವಕೀಲರ ಸಂಘ, ನಾಡಪ್ರಭು ಒಕ್ಕಲಿಗರ ಸಂಘ, ಬಾರ್ ಆ್ಯಂಡ್ ವೈನ್ಸ್ ಸ್ಟೋರ್ ಆಸೊಷಿಯೇಷನ್, ವಿಶ್ವಕರ್ಮ ಸಮಾಜ ರೈತಸಂಘಟನೆಗಳು, ಕಸ್ತೂರಿ ಕರ್ನಾಟಕ ಜನ ಪರ ವೇದಿಕೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆ ಬೆಂಬಲ ವ್ಯಕ್ತಪಡಿಸಿವೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಯಿತು, ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಪ್ರಗತಿಪರ ಸಂಘಟನೆಯ ನ.ಲಿ.ಕೃಷ್ಣ, ಶ್ರೀ,ಕ, ಶ್ರೀನಿವಾಸ್, ಗೊರವನಹಳ್ಳಿ ಪ್ರಸನ್ನ, ರಘು ಉಪ್ಪಿನಕೆರೆ, ಎಚ್.ಪಿ. ಸ್ವಾಮಿ, ಜಾಮೀಯಾ ಷಾದಿ ಕಮಿಟಿಯ ಆದಿಲ್ ಖಾನ್, ವಿಶ್ವಕರ್ಮ ಸಮಾಜದ ಸುಧೀರ್, ವೈನ್ ಸ್ಟೋರ್ ಹಾಗೂ ಬಾರ್ ಮಾಲೀಕರ ಸಂಘದ ಶಿವಪ್ಪ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.