ADVERTISEMENT

ಭಾರತೀನಗರ |ವಿಧಾನಪರಿಷತ್‌ ಸದಸ್ಯ ಮಧು ಜನ್ಮದಿನ : ದೇವಾಲಯಗಳಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:51 IST
Last Updated 25 ಡಿಸೆಂಬರ್ 2025, 6:51 IST
ವಿಧಾನಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಅವರ ಜನ್ಮದಿನದ ಅಂಗವಾಗಿ ಭಾರತೀನಗರದ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಬಿಇಟಿ ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿದರು 
ವಿಧಾನಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಅವರ ಜನ್ಮದಿನದ ಅಂಗವಾಗಿ ಭಾರತೀನಗರದ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಬಿಇಟಿ ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿದರು    

ಭಾರತೀನಗರ: ವಿಧಾನಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಅವರ 61ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಇಲ್ಲಿಯ ಸುತ್ತಮುತ್ತಲ ಗ್ರಾಮಗಳ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇಲ್ಲಿಯ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಪಿಯುಸಿ ಕಾಲೇಜು ಆಡಳಿತಾಧಿಕಾರಿ ಜವರೇಗೌಡ ಅವರ ಣೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜಿಎಂಐಟಿ ಪ್ರಾಂಶುಪಾಲ ಡಾ.ಚಂದನ್‌ ಅವರ ನೇತೃತ್ವದಲ್ಲಿ ಇಲ್ಲಿಯ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಮುಖಂಡ ಸ್ವರೂಪ್‌ಚಂದ್ರ ಕಾರ್ಕಹಳ್ಳಿ ನೇತೃತ್ವದಲ್ಲಿ ಬಸವೇಶ್ವರ ದೇವಾಲಯದಲ್ಲಿ, ತಾ.ಪಂ. ಮಾಜಿ ಸದಸ್ಯ ಭರತೇಶ್‌ ನೇತೃತ್ವದಲ್ಲಿ ಚಿಕ್ಕಅರಸಿನಕೆರೆ ಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ, ಬಿಇಟಿ ಕಾರ್ಯದರ್ಶಿ ಸಿದ್ದೇಗೌಡ, ಪ್ರಾಂಶುಪಾಲ ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ಹನುಮಂತನಗರದ ಆತ್ಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಲಾಯಿತು.

ಭಾರತೀ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್‌.ಮಹದೇವಸ್ವಾಮಿ, ಹೆಲ್ತ್‌ಸೈನ್ಸ್‌ ನಿರ್ದೇಶಕ ತಮೀಜ್‌ಮಣೀ, ನಿವೃತ್ತ ಮುಖ್ಯ ಶಿಕ್ಷಕ ಎಂ.ಮಾಯಪ್ಪ, ಬಿಇಟಿಯ ರಾಜು, ಬಸವರಾಜು, ನಾಗೇಶ್‌, ಲಲಿತಾಕುಮಾರ್‌, ಮಂಜುನಾಥ್‌, ಗ್ರಾ.ಪಂ ಸದಸ್ಯರಾದ ಪುಟ್ಟರಾಮು, ಕೆ.ವಿ.ಶ್ರೀನಿವಾಸ್‌, ಚಾಂಶುಗರ್ಸ್‌ನ ಉಪಾಧ್ಯಕ್ಷ ಆರ್‌.ಮಣಿ, ಡಿಜಿಎಂ ರವಿ ಪಾಲ್ಗೊಂಡಿದ್ದರು.

ADVERTISEMENT

ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಧು ಜಿ.ಮಾದೇಗೌಡ ಅಭಿಮಾನಿಗಳು ರೋಗಿಗಳಿಗೆ ಹಣ್ಣು ವಿತರಿಸಿದರು.

ಮನ್‌ಮುಲ್‌ ಮಾಜಿ ನಿರ್ದೇಶಕ ಎ.ಸಿ.ಸತೀಶ್‌, ಅಣ್ಣೂರು ಎಪಿಸಿಎಸ್‌ ನಿರ್ದೇಶಕ ಆರ್‌.ಸಿದ್ದಪ್ಪ, ಭಾರತೀನಗರ ಗ್ರಾ.ಪಂ ಸದಸ್ಯರಾದ ಕೆ.ಟಿ.ಶ್ರೀನಿವಾಸ್‌, ವಿನಯ್‌ ಹೊನ್ನೇಗೌಡ, ಮಿಥುನ್‌, ಕಬ್ಬಾಳಯ್ಯ, ಕೆ.ವಿ.ಶ್ರೀನಿವಾಸ್‌, ರವಿಚಂದ್ರ, ನಿರಾವರಿ ಇಲಾಖೆ ನಿವೃತ್ತ ಅಭಿಯಂತರ ನಾಗರಾಜು ಕೆ.ಶೆಟ್ಟಹಳ್ಳಿ, ಮೆಣಸಗೆರೆ ಆಲೂರಯ್ಯ, ಅಣ್ಣೂರು ಸಂಜೀವ, ರವಿಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.