
ಮಳವಳ್ಳಿ: ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಕೆಎಸ್ಆರ್‌ಟಿಸಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಬಸ್ ಚಾಲಕನನ್ನು ಅಮಾನತುಗೊಳಿಸಲಾಗಿದೆ.
ಶುಕ್ರವಾರ ಸಂಜೆ ಮಳವಳ್ಳಿಯಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಚಾಲನೆ ಮಾಡುವಾಗ ಚಾಲಕ ವಿ.ಮಹೇಶ್ ತಮ್ಮ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಬಸ್ ಚಾಲಕ ಮಹೇಶ್ ಸ್ಟಿಯರಿಂಗ್ ಬಳಿ ಮೊಬೈಲ್ ಇಟ್ಟುಕೊಂಡು ರೀಲ್ಸ್ ನೋಡುತ್ತಾ ಬಸ್ ಓಡಿಸುತ್ತಿರೊ ವಿಡಿಯೊ ಸೆರೆಯಾಗಿದೆ. ಬಸ್ ಸುಮಾರು 70-80 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಮಹೇಶ್ ಆ ಸಮಯದಲ್ಲಿ ಚಾಲಕನ ಗಮನ ಸಂಪೂರ್ಣವಾಗಿ ಮೊಬೈಲ್ ಮೇಲೆ ಇತ್ತು ಎಂದು ವಿಡಿಯೊ ನಿಖರವಾಗಿ ತೋರಿಸುತ್ತದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಸ್ಆರ್‌ಟಿಸಿ ಅಧಿಕಾರಿಗಳು ರಸ್ತೆಯಲ್ಲಿ ಸಂಭವಿಸುವ ಸಾಕಷ್ಟು ಅಪಘಾತಗಳು ಬೇಜವಾಬ್ದಾರಿತನ, ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸುತ್ತವೆ. ಸಾರ್ವಜನಿಕ ಸಾರಿಗೆಯ ಬಸ್‌ನಲ್ಲಿ ಚಾಲಕನ ಈ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ವರ್ತನೆಗೆ ನಿಗಮವು ಅವರನ್ನು ವಿಚಾರಣಾ ಪೂರ್ವ ಅಮಾನತು ಮಾಡಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.