ADVERTISEMENT

ಮಂಡ್ಯ | ಆಕಸ್ಮಿಕ ಬೆಂಕಿ: ಲಕ್ಷಾಂತರ ರೂಪಾಯಿ ಮೌಲ್ಯದ ಕೊಬ್ಬರಿ ನಾಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 15:46 IST
Last Updated 10 ಡಿಸೆಂಬರ್ 2025, 15:46 IST
   

ಮಂಡ್ಯ: ಕೊಬ್ಬರಿ ಶೆಡ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲ್ಲೂಕಿನ ಗುನ್ನಾಯಕನಹಳ್ಳಿಯಲ್ಲಿ ಬುಧವಾರ ನಡೆದಿದೆ.

ಗ್ರಾಮದ ಪುಟ್ಟೇಗೌಡರ ಪುತ್ರ ಜಿ.ಪಿ.ಪ್ರಸನ್ನ ಅವರು ಕಾಯಿ ವ್ಯಾಪಾರಿಯಾಗಿದ್ದು, ಕೊಬ್ಬರಿ ಖರೀದಿಸಿ ತಮ್ಮ ಶೆಡ್ ನಲ್ಲಿ ಇಟ್ಟಿದ್ದರು.

ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಡೀ ಶೆಡ್ ನಲ್ಲಿದ್ದ ಕೊಬ್ಬರಿ ಸಹಿತ ಎಲ್ಲ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿ 12 ಟನ್ ಕೊಬ್ಬರಿ ಸೇರಿ ಸುಮಾರು ₹55 ಲಕ್ಷ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ADVERTISEMENT

ವಿಷಯ ತಿಳಿದು ಎರಡು ಅಗ್ನಿಶಾಮಕದಳ ತಂಡದ ಸಿಬ್ಬಂದಿ ಬೆಂಕಿ ನಂದಿಸಿದಾದರೂ ಅಷ್ಟರಾಗಲೇ ಶೆಡ್ ನಲ್ಲಿದ್ದ ಕೊಬ್ಬರಿ ಸುಟ್ಟು ನಾಶವಾಗಿದೆ. ಪ್ರಕರಣ ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‌ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.