ಹೋಳಿಗೆ ತಯಾರಿ
ಮಂಡ್ಯ: ಡಿಸೆಂಬರ್ 20, 21 ಮತ್ತು 22 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಆಹ್ವಾನಿತರು ಮತ್ತು ಸಾರ್ವಜನಿಕರಿಗಾಗಿ 1 ಲಕ್ಷ ಹೋಳಿಗೆ ತಯಾರಿಸುವ ಕಾರ್ಯ ಈಗಾಗಲೇ ಸಮ್ಮೇಳನದ ವೇದಿಕೆ ಸ್ಥಳದಲ್ಲಿ ಶುರುವಾಗಿದೆ.
750 ಬಾಣಸಿಗರು ಮತ್ತು ಅಡುಗೆ ಸಹಾಯಕರ ತಂಡ ಹೋಳಿಗೆ ಸೇರಿದಂತೆ ತಲಾ ಒಂದು ಲಕ್ಷ ಬಾದೂಷ, ಲಡ್ಡು, ಮೈಸೂರು ಪಾಕ್ ಸ್ವೀಟ್‌ಗಳನ್ನು ತಯಾರು ಮಾಡುತ್ತಿದ್ದಾರೆ.
‘2016ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಡುಗೆ ಮಾಡಿದ್ದೆವು. ಈಗ 2ನೇ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಸಿಕ್ಕಿದೆ.
ಒಟ್ಟು 2,500 ಪಾಕ ಪ್ರವೀಣರ ತಂಡ ಶುಚಿ–ರುಚಿಯಾದ ಆಹಾರ ತಯಾರಿಸುವಲ್ಲಿ ನಿರತವಾಗಿದೆ‘ ಎಂದು ಮೈಸೂರಿನ ‘ನವನೀತ ಕ್ಯಾಟರರ್ಸ್’ ಮಾಲೀಕರಾದ ಶಿಲ್ಪಾ ಮತ್ತು ಶಿವಣ್ಣ ದಂಪತಿ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.