ADVERTISEMENT

ಮೊಳಗಿತು ಮಂಡ್ಯ ಜನರ ‘ಸ್ವಾಭಿಮಾನ’ದ ಕಹಳೆ, ಅಂಬರೀಷ್‌ ಅಭಿಮಾನ

​ಪ್ರಜಾವಾಣಿ ವಾರ್ತೆ
Published 23 ಮೇ 2019, 16:46 IST
Last Updated 23 ಮೇ 2019, 16:46 IST
   

ಮಂಡ್ಯ:ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದ್ದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಮಂಡ್ಯದ ಜನರ ಸ್ವಾಭಿಮಾನದ ಗೆಲುವಿಗೆ ಸಾಕ್ಷಿಯಾಗಿದರು. ಐತಿಹಾಸಿಕ ದಾಖಲೆಯನ್ನೂ ಬರೆದರು.

ಮುಖ್ಯಮಂತ್ರಿ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರ್‌ಗೆ 1,25,876 ಮತಗಳ ಅಂತರದಲ್ಲಿ ಹೀನಾಯ ಸೋಲುಣಿಸುವ ಮೂಲಕ ಮತದಾರರು ಸುಮಲತಾ ಅವರಿಗೆ ‘ಸ್ವಾಭಿಮಾನ’ಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಮಡಿಲು ತುಂಬಿದ ಮತ...

ADVERTISEMENT

ಪ್ರಚಾರ ವೇಳೆ ಸುಮಲತಾ ಸೆರಗೊಡ್ಡಿ ಮತ ಭಿಕ್ಷೆ ಕೇಳಿದ್ದರೆ. ಅವರ, ಕರೆಗೆ ಓಗೊಟ್ಟ ಮತದಾರರು, ಅಂಬರೀಷ್ ಅಭಿಮಾನಿಗಳು ಸುಮಲತಾ ಅವರ ಮಡಿಲಿಗೆ ಮತಗಳನ್ನು ಹಾಕಿ ಕೊಡುಗೆ ಕೊಟ್ಟಿದ್ದಾರೆ.

ಸುಮಲತಾ ಪಡೆದ ಮತ: 7,03,660

ಗೆಲುವಿನ ಅಂತರ: 1,25,876

ಸೋತ ಮೈತ್ರಿ ಅಭ್ಯರ್ಥಿ: ಕೆ.ನಿಖಿಲ್ ಪಡೆದ ಮತ: 5,77,784

2014ರಲ್ಲಿ ಗೆದ್ದವರು– ಸಿ.ಎಸ್.ಪುಟ್ಟರಾಜು

2018ರ ಉಪಚುನಾವಣೆ: ಎಲ್.ಆರ್.ಶಿವರಾಮೇಗೌಡಗೆ ಗೆಲುವಾಗಿತ್ತು.

ಸ್ವಾಭಿಮಾನಿ ಸಮೇವೇಶದಲ್ಲಿ ರಾಕ್‌ಲೈನ್‌ ವೆಂಕಟೇಶ್‌, ಅಂಬರೀಷ್‌ ಪುತ್ರ ಅಭಿಷೇಕ್‌, ನಟ ಯಶ್‌, ಸುಮಲತಾ, ನಟ ದರ್ಶನ್‌, ಹಿರಿಯ ನಟ ದೊಡ್ಡಣ್ಣ ಒಗ್ಗಟ್ಟಿನ ಬಲ ಪ್ರದರ್ಶಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.