
ಸಂತೇಬಾಚಹಳ್ಳಿ: ಸಾರ್ವಜನಿಕರಿಗೆ ವಿದ್ಯುತ್ ಕೂಡ ಮೂಲಭೂತ ಸೌಕರ್ಯದಲ್ಲಿ ಒಂದಾಗಿದ್ದು ಸಕಾಲದಲ್ಲಿ ಎಲ್ಲರಿಗೂ ವಿದ್ಯುತ್ ನೀಡಲಾಗುತ್ತದೆ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.
ಇಲ್ಲಿನ ಮಾರೆನಹಳ್ಳಿ (ಹರಿಯಾಲದಮ್ಮ ದೇವಸ್ಥಾನ) ಬಳಿ ₹5 ಕೋಟಿ ವೆಚ್ಚದ ಕಾಮಗಾರಿ ಎ. ಬಿ ಕೇಬಲ್ ಹಾಗೂ ಕವರ್ಡ್ ಕಂಡಕ್ಟರ್ ಅಲವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಮಾರೆನಹಳ್ಳಿಯಲ್ಲಿ ಸರಿಯಾದ ಸಂದರ್ಭಕ್ಕೆ ವಿದ್ಯುತ್ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿದ್ದವು. ಆದುದ್ದರಿಂದ ಇದೇ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಒಟ್ಟು 10 ಕೋಟಿ ಅನುದಾನ ಬಂದಿದೆ. ಇದನ್ನು ಎರಡು ಕಡೆ ವಿಭಜನೆ ಮಾಡಲಾಗಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡದೆ ತಂತಿಗೆ ಕವರ್ಡ್ ಕಂಡಕ್ಟರ್ ಹಾಕಿ ಶೀಘ್ರದಲ್ಲಿ ಕಾಮಗಾರಿ ಮುಗಿಸಬೇಕು’ ಎಂದರು.
ಎ.ಇ. ಇ ಪುಟ್ಟಸ್ವಾಮಿಗೌಡ, ಜೆ. ಇ. ಶಿವ ಶಂಕರಮೂರ್ತಿ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ದಿಲೀಪ್, ತಾ. ಪಂ. ಮಾಜಿ ಸದಸ್ಯ ಮೋಹನ್, ಗಂಗನಹಳ್ಳಿ ಶಿವಣ್ಣ,ಮುಖಂಡ ಸಾಮಿಲ್ ಚಂದ್ರು, ಚಂದ್ರಹಾಸ, ಐನೊರಹಳ್ಳಿ ಮಲ್ಲೇಶ್, ನಾಗೇಶ್, ಕಾರ್ಯದರ್ಶಿ ಜಯರಾಮ್, ಬಿಲ್ ಕಲೆಕ್ಟರ್ ಸೋಮಶೇಖರ್, ಮಾರೆನಹಳ್ಳಿ ನಾಗೇಶ್ ವೇದಮೂರ್ತಿ, ವಾಸು (ಶ್ರೀನಿವಾಸ್), ಗ್ರಾ.ಪಂ. ಸದಸ್ಯ ಸುನಿಲ್, ಶಿವಕುಮಾರ್, ಶಿವರಾಮ್, ನರ್ಸರಿ ಚಂದ್ರಣ್ಣ, ನಿರುಗಂಟಿ ನಾಗರಾಜ್, ವಿದ್ಯುತ್ ಇಲಾಖೆ ಸಿಬ್ಬಂದಿ ಗಿರೀಶ್, ಹರ್ಷಿತ್, ಪ್ರವೀಣ್ ಇದ್ದರು.