ADVERTISEMENT

ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ: ಪರಿಚಿತ ಯುವಕ ನಿತೇಶ್ ಮೇಲೆ ಶಂಕೆ

ಎಸ್ಇಟಿ ಶಾಲೆಯ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 5:32 IST
Last Updated 24 ಜನವರಿ 2024, 5:32 IST
<div class="paragraphs"><p>ದೀಪಿಕಾ,&nbsp;ನಿತೇಶ್ </p></div>

ದೀಪಿಕಾ, ನಿತೇಶ್

   

ಮೇಲುಕೋಟೆ: ‘ಇಲ್ಲಿನ ಎಸ್ಇಟಿ ಶಾಲೆಯ ಶಿಕ್ಷಕಿಯನ್ನು ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೊಲೆ‌ಮಾಡಿ ಮಣ್ಣಿನಲ್ಲಿ ಹೂತು ಹಾಕಿದ್ದು, ಅದೇ ಗ್ರಾಮದ ಪರಿಚಿತ ಯುವಕ ನಿತೇಶ್ ಕುಮಾರ್ ಎಂದು ಶಂಕೆ ವ್ಯಕ್ತವಾಗಿದೆ. ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಿಲಾಗಿದೆ’ ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಹೇಳಿದ್ದಾರೆ.

ಮೇಲುಕೋಟೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ‌ ಶನಿವಾರ‌ ಮಾಣಿಕ್ಯ ಗ್ರಾಮದ ಲೋಕೇಶ್ ಅವರ ಪತ್ನಿ ದೀಪಿಕಾ ನಾಪತ್ತೆ ಕುರಿತು ಮೇಲುಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯೋಗಾನರಸಿಂಹ ಸ್ವಾಮಿ ಬೆಟ್ಟದ ಮೇಲೆ ಪ್ರವಾಸಿಗರೊಬ್ಬರು ರೀಲ್ಸ್ ಮಾಡುವಾಗ ಬೆಟ್ಟದ ಹಿಂಭಾಗ ವ್ಯಕ್ತಿಯೊಬ್ಬ ಕೊಲೆ ಮಾಡುವುದನ್ನು ಕಂಡು 13 ಸೆಕೆಂಡ್ ವಿಡಿಯೊ ಚಿತ್ರೀಕರಿಸಿ ಠಾಣೆಗೆ ಬಂದು ನೀಡಿದ್ದಾರೆ. ಇದಾದ ಬಳಿಕ ಬೆಟ್ಟದ ಹಿಂಭಾಗ ಪೊಲೀಸರು ಸುತ್ತ ಮುತ್ತ ಹುಡುಕಾಟ ಮಾಡಿದಾಗ ಸ್ಕೂಟರ್ ಸಿಕ್ಕಿತ್ತು. ನಂತರ ಹುಡುಕಾಟ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.

ADVERTISEMENT

ಎರಡು ದಿನಗಳ ಬಳಿಕ ಆ ಸ್ಥಳದಲ್ಲಿ ದುರ್ವಾಸನೆ ಬರುತ್ತಿದ್ದ ಸ್ಥಳದಲ್ಲಿ ಗುಂಡಿ ತೆಗೆದು ನೋಡಿದಾಗ ಗೋಣಿ ಚೀಲದಲ್ಲಿ ಶವ ಪತ್ತೆಯಾಗಿದೆ. ಪೋಷಕರು ಕೂಡ ಶವ ದೀಪಿಕಾಳದ್ದೇ ಅಂತಾ ಗುರುತಿಸಿದ್ದಾರೆ.

‘ಕೊಲೆ ಪ್ರಕರಣ ದಾಖಲಿಸಿ ಕಾಣೆಯಾದ ಹುಡುಗ ನಿತೇಶಗಾಗಿ ಹುಡುಕಾಟ ನಡೆಸಿದ್ದೇವೆ. ಹಲವು ಆಯಾಮಗಳಲ್ಲಿ ಈ ಪ್ರಕರಣ ತನಿಖೆ ಮಾಡುತ್ತಿದ್ದು, ಶನಿವಾರ ಪ್ರವಾಸಿಗರು ನೀಡಿದ ವಿಡಿಯೊ ಆಧಾರದ ಮೇಲೆ ತನಿಖೆ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.