ADVERTISEMENT

ಮದ್ದೂರು: ಅಪಘಾತದಲ್ಲಿ ಪಲ್ಟಿಯಾದ ವಾಹನ ಮೇಲೆತ್ತಲು ನೆರವಾದ ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 8:28 IST
Last Updated 2 ಮಾರ್ಚ್ 2025, 8:28 IST
   

ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಬಸ್ಸು ಮತ್ತು ಆಟೊ ನಡುವೆ ಭಾನುವಾರ ಅಪಘಾತ ಸಂಭವಿಸಿ ಪಲ್ಟಿಯಾಗಿದ್ದ ಆಟೊವನ್ನು ಶಾಸಕ ಬಾಲಕೃಷ್ಣ ಮತ್ತು ಅವರ ಕಾರಿನಲ್ಲಿದ್ದವರು ಮೇಲಕ್ಕೆತ್ತಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಲು ನೆರವಾದರು.

ಕಾರ್ಯ ನಿಮಿತ್ತ ಬಾಲಕೃಷ್ಣ ಅವರು ಮದ್ದೂರಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ತಿಮ್ಮದಾಸ್ ಹೋಟೆಲ್ ಬಳಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಆಟೊ ಪಲ್ಟಿಯಾಗಿತ್ತು. ಮಹಿಳಾ ಮತ್ತು ಪುರುಷ ಪ್ರಯಾಣಿಕರು ಒಳಗೆ ಸಿಕ್ಕಿ ಹಾಕಿಕೊಂಡಿದ್ದರು.

ಆಗ ಬಾಲಕೃಷ್ಣ ಅವರು ತಕ್ಷಣ ತಮ್ಮ ಕಾರು ನಿಲ್ಲಿಸಿ, ಬೆಂಬಲಿಗರೊಂದಿಗೆ ಆಟೊವನ್ನು ಮೇಲಕ್ಕೆತ್ತಿದರು. ನಂತರ, ಆರು ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಮದ್ದೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಬಳಿಕ ತಮ್ಮ ಕಾರ್ಯಕ್ಕೆ ತೆರಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.