
ಮದ್ದೂರು: ಹಳ್ಳಿ ಜನರಿಗೆ ಅದರಲ್ಲೂ ಮಹಿಳೆಯರಿಗೆ ಹೈನುಗಾರಿಕೆಯೇ ಪ್ರಮುಖ ಆರ್ಥಿಕ ಮೂಲಗಳಲ್ಲೊಂದಾಗಿದ್ದು ಎಷ್ಟೋ ಕುಟುಂಬಗಳು ಇದನ್ನೇ ಅವಲಂಬಿಸಿವೆ ಎಂದು ಶಾಸಕ ಕೆ. ಎಂ ಉದಯ್ ತಿಳಿಸಿದರು.
ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಸೋಮವಾರ ಪಶು ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಕೃಷಿ ಮತ್ತು ಹೈನುಗಾರಿಕೆಯೇ ಪ್ರಮುಖವಾಗಿದೆ. ಹಲವು ಕುಟುಂಬಗಳ ನಿರ್ವಹಣೆಗೆ ಹೈನುಗಾರಿಕೆಯಿಂದ ಆರ್ಥಿಕಾಭಿವೃದ್ಧಿ ಸಾಧ್ಯವಾಗುತ್ತಿದೆ. ಹೀಗಾಗಿ, ರಾಸುಗಳಿಗೆ ತೊಂದರೆಯಾದಲ್ಲಿ ಕುಟುಂಬದ ಆಧಾರವೇ ಕಳಚಿ ಬಿದ್ದಾಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯ ಹಿನ್ನೆಲೆಯಲ್ಲಿ ಬೇರೆ ಗ್ರಾಮಕ್ಕೆ ಮಂಜೂರಾಗಿದ್ದ ಆಸ್ಪತ್ರೆಯನ್ನು ದೊಡ್ಡ ಗ್ರಾಮವಾದ ವಳಗೆರೆಹಳ್ಳಿಯಲ್ಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.
ಗ್ರಾ.ಪಂ, ಸದಸ್ಯರಾದ ಎಸ್.ದಯಾನಂದ್, ವಿ.ಆರ್.ಸುನೀಲ್, ವಿ.ಎಚ್.ಶಿವಲಿಂಗಯ್ಯ, ಎಸ್.ಕೆ.ಗಿರೀಶ್, ಕಾಂಗ್ರೆಸ್ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಮುಖಂಡರಾದ ಉಮಾಶಂಕರ್, ಟಿ.ಪುಟ್ಟರಾಜು, ಶ್ರೀನಿವಾಸ್‌ಕುಮಾರ್, ವಿ.ಕೆ.ಗಿರೀಶ್, ಆದೇಶ್, ಸೋ.ಶಿ.ಪ್ರಕಾಶ್, ಹೊಂಬಯ್ಯ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೋವಿಂದ್, ಪಶು ವೈದ್ಯ ಡಾ.ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.