ADVERTISEMENT

ನಿಗೂಢ ಶಬ್ದ: ಜನರ ಆತಂಕ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:34 IST
Last Updated 29 ನವೆಂಬರ್ 2018, 20:34 IST

ಮಂಡ್ಯ: ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನ 3.40ಕ್ಕೆ ದೊಡ್ಡ ಶಬ್ದ ಉಂಟಾಗಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾರ್ವಜನಿಕರು ಭಯಭೀತರಾದರು.

ಮಂಡ್ಯ, ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ, ಪಾಂಡವಪುರ ತಾಲ್ಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜೋರಾದ ಶಬ್ದ ಉಂಟಾಗಿದೆ. ಮನೆ, ಕಟ್ಟಡಗಳಲ್ಲಿ ಬಾಗಿಲು, ಕಿಟಕಿಗಳು ಅಲುಗಾಡಿದ ಹಾಗೂ ಕಂಪನದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ.

ಕೆಆರ್‌ಎಸ್ ಬಳಿಯಿರುವ ಭೂಕಂಪ ಮಾಪನ ಕೇಂದ್ರದಲ್ಲಿ ಕಂಪನದ ವಿವರ ದಾಖಲಾಗಿಲ್ಲ ಎಂದು ಭೂಗರ್ಭಶಾಸ್ತ್ರಜ್ಞ ನಾಗೇಶ್‌ ತಿಳಿಸಿದ್ದಾರೆ.

ADVERTISEMENT

ಎರಡು ತಿಂಗಳ ಹಿಂದೆ ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಇಂತಹದ್ದೇ ಭಾರಿ ಶಬ್ದ ಉಂಟಾಗಿದ್ದು ಸ್ಪಷ್ಟ ಕಾರಣ ತಿಳಿದುಬಂದಿರಲಿಲ್ಲ. ಜನರು ಪೊಲೀಸ್ ಠಾಣೆಗೆ ಕರೆ ಮಾಡಿ ಶಬ್ದದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಶಬ್ದದ ಹಿಂದೆಯೇ ಜೆಟ್‌ ವಿಮಾನವೊಂದು ಹಾದು ಹೋದ ಕಾರಣ ಶಬ್ದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.