
ಕೆ.ಆರ್.ಪೇಟೆ: ತಾಲ್ಲೂಕಿನ ಕಲ್ಲಹಳ್ಳಿಯ ಭೂವರಾಹನಾಥ ಸ್ವಾಮಿ ದೇವಾಲಯದಲ್ಲಿ ಹೊಸ ವರ್ಷಾಚರಣೆಯ ನಿಮಿತ್ತ ಗುರುವಾರ ಲೋಕ ಕಲ್ಯಾಣಾರ್ಥವಾಗಿ ಭೂವರಾಹನಾಥ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು.
ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಹೊಸವರ್ಷದಲ್ಲಿ ಶುಭವಾಗುವಂತೆ ಪ್ರಾರ್ಥಿಸಿದರು.
ಹೊಸವರ್ಷದ ಮೊದಲದಿನ ಭೂವರಾಹನಾಥನ ದರ್ಶನ ಮಾಡಿದರೆ ಭೂಸಂಭಂದಿ ವ್ಯವಹಾರಗಳು ಸಗುಮವಾಗಿ ನೆರವೇರುತ್ತವೆ, ವರ್ಷಪೂರ್ತಿ ಉತ್ತಮವಾದ ವ್ಯವಹಾರಗಳನ್ನು ಮಾಡಬಹುದೆಂಬ ನಂಬಿಕೆ ಇರುವುದರಿಂದ ಭಕ್ತರ ಮಹಾಪೂರವೇ ಶ್ರೀಕ್ಷೇತ್ರಕ್ಕೆ ಹರಿದುಬಂದಿದೆ. ಬಂದ ಭಕ್ತರಿಗಾಗಿ ಪ್ರಸಾದವಾಗಿ ಲಡ್ಡು ಪುಳಿವೊಗೆರೆ ,ಮೊಸರನ್ನವನ್ನು ಪ್ರಸಾದವಾಗಿ ಅನ್ನದಾಸೋಹ ಮಾಡಲಾಗುತ್ತಿದೆ. ಭಕ್ತರು ಸಾವಕಾಶದಿಂದ ದೇವರ ದರ್ಶನ ಪಡೆಯುತಿದ್ದು ಶ್ರೀಕ್ಷೇತ್ರಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ಶುಭವಾಗಲಿ, ಎಂದು ಪ್ರಾರ್ಥಿಸಿರುವದಾಗಿ ದೇವಸ್ಥಾನದ ವ್ಯವಸ್ಥಾಪಕ ಧರ್ಮದರ್ಶಿ ಶ್ರೀನಿವಾಸ ರಾಘವನ್ ತಿಳಿಸಿದರು.
ಆಗಮಿಸಿದ್ದ ಭಕ್ತರಿಗೆ ದೇವಸ್ಥಾನದ ವತಿಯಿಂದ ಮುಂಜಾನೆಯಿಂದ ಸಂಜೆಯವರೆಗೂ ಪ್ರಸಾದ ವಿತರಣೆ ನಡೆಯಿತು. ಹೊಸ ವರ್ಷದ ನಿಮಿತ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಮೈಸೂರು – ಕೆ.ಆರ್.ಪೇಟೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.