
ಪ್ರಜಾವಾಣಿ ವಿಶೇಷಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿ ಇರುವ ಎಂ. ಅಂಕೇಗೌಡರ ‘ಪುಸ್ತಕ ಮನೆ’ ಜ್ಞಾನವೇ ಜೀವನ ಎಂಬ ತತ್ತ್ವದ ಜೀವಂತ ಪ್ರತೀಕ. ಇದು ಕೇವಲ ಪುಸ್ತಕಗಳ ಸಂಗ್ರಹವಲ್ಲ 20 ವರ್ಷಗಳ ಕನಸು, ಅಚಲ ಪರಿಶ್ರಮ ಮತ್ತು ಅಪಾರ ಸಮರ್ಪಣೆಯಿಂದ ನಿರ್ಮಿತವಾದ ಜ್ಞಾನಲೋಕ. 20 ಲಕ್ಷಕ್ಕೂ ಅಧಿಕ ಪುಸ್ತಕಗಳು, ಪತ್ರಿಕೆಗಳು ಹಾಗೂ ಅಪರೂಪದ ಹಸ್ತಪ್ರತಿಗಳನ್ನು ಒಳಗೊಂಡಿರುವ ಈ ಜ್ಞಾನದೇಗುಲಕ್ಕೆ 2026ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಹಳ್ಳಿಯ ಮಣ್ಣಲ್ಲಿ ಬೆಳೆದ ಓದಿನ ಕನಸಿಗೆ ರಾಷ್ಟ್ರಮಟ್ಟದ ಗೌರವವನ್ನು ತಂದುಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.