ADVERTISEMENT

ಪಾಂಡವಪುರ: 52 ಪಿಒಪಿ ಮೂರ್ತಿ ವಶ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:19 IST
Last Updated 27 ಆಗಸ್ಟ್ 2025, 3:19 IST
ಪಾಂಡವಪುರ ಪಟ್ಟಣದ ಸಾರಿಗೆ ಬಸ್‌ ಡಿಪೋ ಬಳಿ ಗೋದಾಮಿನಲ್ಲಿ ಇಟ್ಟಿದ್ದ 52 ಪಿಓಪಿ ಗಣೇಶ ಮೂರ್ತಿಗಳನ್ನು ತಹಶೀಲ್ದಾರ್ ಎಸ್..ಸಂತೋಷ್ ನೇತೃತ್ವದ ಅಧಿಕಾರಿಗಳು ವಶಕ್ಕೆ ಪಡೆದರು. ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಆರೋಗ್ಯ ನಿರೀಕ್ಷಕಿ ಧನಲಕ್ಷ್ಮಿ, ಪೊಲೀಸ್ ಇನ್ಸ್‌ಪೆಕ್ಟರ್ ಶರತ್ ಕುಮಾರ್, ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಉಮೇಶ್ ಇದ್ದಾರೆ.

ಪಾಂಡವಪುರ: ಪಟ್ಟಣದ ಸಾರಿಗೆ ಬಸ್‌ ಡಿಪೋ ಬಳಿಯ ಗೋದಾಮಿನಲ್ಲಿ ತಹಶೀಲ್ದಾರ್ ಎಸ್.ಸಂತೋಷ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಕಾನೂನು ಬಾಹಿರವಾಗಿ ಇಟ್ಟಿದ್ದ 52 ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದು, ಗೋದಾಮಿಗೆ ಬೀಗ ಮುದ್ರೆ ಹಾಕಿದರು.

ಹಿರೇಮರಳಿ ಗ್ರಾಮದ ಚಲುವೇಗೌಡ  ಎಂಬವರ ಗೋದಾಮಿನಲ್ಲಿ ಬೇವಿನಕುಪ್ಪೆ ಗ್ರಾಮದ  ಪವನ್ ಅವರು   52 ಪಿಒಪಿ ಗಣೇಶ ಮೂರ್ತಿಗಳನ್ನು ಇಟ್ಟಿದ್ದರು.

ತಹಶೀಲ್ದಾರ್ ಎಸ್.ಸಂತೋಷ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಆರೋಗ್ಯ ನಿರೀಕ್ಷಕಿ ಧನಲಕ್ಷ್ಮಿ, ಪೊಲೀಸ್ ಇನ್‌ಸ್ಪೆಕ್ಟರ್ ಶರತ್ ಕುಮಾರ್, ಪಿಎಸ್‌ಐ ಉಮೇಶ್  ಕಾರ್ಯಾಚರಣೆ ನಡೆಸಿ, ಪವನ್ ಅವರಿಗೆ ದಂಡ ವಿಧಿಸಿದ್ದಾರೆ.

ADVERTISEMENT

ಪಟ್ಟಣದ ಹಳೆ ಬಸ್‌ ನಿಲ್ದಾಣ, ಪೊಲೀಸ್ ವಸತಿ ಗೃಹ ಸ್ಥಳದ ಎದುರಿನ ಅಂಗಡಿ ಸೇರಿದಂತೆ ವಿವಿಧೆಡೆ ರಾಸಾಯನಿಕಯುಕ್ತ ಮಣ್ಣಿನ ಗಣಪತಿ ಮೂರ್ತಿಗಳನ್ನು ಇಟ್ಟಿದ್ದವರ ವಿರುದ್ಧ  ಕ್ರಮವಹಿಸಿದರು.
 ತಹಶೀಲ್ದಾರ್ ಎಸ್.ಸಂತೋಷ್, ಪಿಒಪಿ  ಮೂರ್ತಿಗಳನ್ನು ಇಡಬಾರದು ಎಂದು ಮಾರಾಟಗಾರರ ಸಭೆ ನಡೆಸಿ ನಿರ್ದೇಶನ ನೀಡಲಾಗಿತ್ತು.   ರಾಸಾಯನಿಕ ಮಣ್ಣಿನ ಗಣೇಶ್ ಮೂರ್ತಿಗಳನ್ನು ಇಟ್ಟಿದ್ದವರ ಮೇಲೂ ಕ್ರಮವಹಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.