ಶ್ರೀರಂಗಪಟ್ಟಣ: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಟ್ಟಣದ ಪ್ರಧಾನ ಅಂಚೆ ಕಚೇರಿ ಬಳಿ ಶುಕ್ರವಾರ ಅಂಚೆ ಪತ್ರ ಚಳವಳಿ ನಡೆಸಿದರು. ಮುಖ್ಯಮಂತ್ರಿಗೆ ಅಂಚೆ ಪತ್ರಗಳನ್ನು ಕಳುಹಿಸಿದರು.
‘ಹೊಸ ಪಿಂಚಣಿ ಯೋಜನೆ ಅಸಮಂಜಸವಾಗಿದೆ. ಈ ಹಿಂದೆ ಇದ್ದ ಪಿಂಚಣಿ ಯೋಜನೆಯನ್ನೇ (ಒಪಿಎಸ್) ಮುಂದುವರಿಸಬೇಕು. ಈ ಬೇಡಿಕೆಗಾಗಿ ಸಾಂಕೇತಿಕವಾಗಿ ಪತ್ರ ಚಳವಳಿ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ತೀವ್ರ ಸ್ವರೂಪದ ಚಳವಳಿ ರೂಪಿಸಲಾಗುವುದು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್. ಲೋಕೇಶ್ ಎಚ್ಚರಿಸಿದರು.
ವಿದ್ಯಾ ಇಲಾಖಾ ನೌಕರರ ಸಹಕಾರ ಸಂಘದ ಅಧ್ಯಕ್ಷ ಟಿ.ಪಿ. ಕುಮಾರ್ ಮಾತನಾಡಿ, ‘ಹೊಸ ಪಿಂಚಣಿ ಯೋಜನೆಗೆ ಪರಿಶೀಲನೆ ಹಂತದಲ್ಲೇ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೂ ಅದನ್ನು ಜಾರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಶಿಕ್ಷಕರ ಹಿತಕ್ಕೆ ವಿರುದ್ಧವಾಗಿರುವ ಈ ಯೋಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮೋಹನ್, ಖಜಾಂಚಿ ಸುನೀತಾ, ಪದಾಧಿಕಾರಿಗಳಾದ ಸಿ. ಮಹೇಶ್, ಎನ್.ಎನ್. ಪ್ರಕಾಶ್, ಸುರೇಶ್, ಸಿ.ಎಸ್. ವಾಣಿ, ಡಿ. ರಮೇಶ್, ಎಸ್.ಎಂ. ವನಜಾಕ್ಷಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.