ADVERTISEMENT

ಹಲಗೂರು: ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 11:27 IST
Last Updated 23 ಮೇ 2025, 11:27 IST
ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮದಲ್ಲಿ ಕೂಲಿಕಾರರು ಕೂಲಿ ಕೆಲಸ ನೀಡಬೇಕು ಅಹೋರಾತ್ರಿ ಪ್ರತಿಭಟನೆ ನಡೆಸಿದರು
ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮದಲ್ಲಿ ಕೂಲಿಕಾರರು ಕೂಲಿ ಕೆಲಸ ನೀಡಬೇಕು ಅಹೋರಾತ್ರಿ ಪ್ರತಿಭಟನೆ ನಡೆಸಿದರು   

ಹಲಗೂರು: ಸಮೀಪದ ಲಿಂಗಪಟ್ಟಣ ಗ್ರಾಮ ಪಂಚಾಯತಿ ಪಿಡಿಒ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಕೂಲಿಕಾರರು ಗುರುವಾರ ಆಹೋರಾತ್ರಿ ಪ್ರತಿಭಟನೆ ನಡೆಸಿದರು.

ಪಿಡಿಒ ವಿಜಯ್ ಕುಮಾರ್ ಒಂದು ಗುಂಪಿಗೆ ಎನ್.ಎಂ.ಆರ್. ತೆಗೆದು ಕೆಲಸ ನೀಡಿದ್ದು, ಮತ್ತೊಂದು ಗುಂಪಿಗೆ ಉದ್ದೇಶಪೂರ್ವಕವಾಗಿ ಎನ್.ಎಂ.ಆರ್. ತೆಗೆಯದೇ ದ್ರೋಹವೆಸಗಿದ್ದಾರೆ. ಮಧ್ಯಾಹ್ನದಿಂದ ಮನವಿ ಮಾಡಿದರೂ, ಬೇಕಾಬಿಟ್ಟಿ ಮಾತನಾಡುತ್ತಾರೆ. ಎನ್.ಎಂ.ಆರ್.ತೆಗೆದು ಕೂಲಿ ಕೆಲಸ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ’ ಎಂದು ಮುಖಂಡರಾದ ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಲಿಕಾರರಾದ ಲಕ್ಷ್ಮಿ, ವಸಂತಮ್ಮ, ನಾಗಮ್ಮ, ರತ್ನಮ್ಮ, ತೇಜಸ್ವಿನಿ, ಗೌರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.