ಪಾಂಡವಪುರ: ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಮುಂದೆ ಫ್ಲೆಕ್ಸ್, ಕಟೌಟ್‌ಗಳನ್ನು ಹಾಕಿರುವುದಕ್ಕೆ ಸಾರ್ವಜನಿಕರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಜನ್ಮದಿನದ ಶುಭಾಶಯ ಕೋರಿ ಭಾನುವಾರ ಜೆಡಿಎಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ತಾಲ್ಲೂಕು ಆಡಳಿತ ಸೌಧದ ಮುಂದೆ ಫ್ಲೆಕ್ಸ್, ಕಟೌಟ್‌ಗಳನ್ನು ಹಾಕಿರುವುದರಿಂದ ಆಡಳಿತ ಸೌಧವೇ ಮುಚ್ಚಿಹೋಗಿದೆ.
‘ಪಟ್ಟಣದಲ್ಲಿ ಫ್ಲೆಕ್ಸ್ ಮತ್ತು ಕಟೌಟ್‌ಗಳನ್ನು ಹಾಕಬೇಕಾದರೆ ಪುರಸಭೆಯ ಅನುಮತಿ ಪಡೆಯಬೇಕೆಂಬುದು ನಿಯಮ. ಪಟ್ಟಣದ ಹಲವೆಡೆ ಹಾಕಲಾಗಿದೆ. ಆದರೆ ಸರ್ಕಾರಿ ತಾಲ್ಲೂಕು ಆಡಳಿತ ಸೌಧದ ಮುಂದೆ ಫ್ಲೆಕ್ಸ್ ಹಾಕಿರುವುದು ಸರಿಯಲ್ಲ ’ ಎಂದು ಸಾರ್ವಜನಿಕರಾದ ಸಿದ್ದೇಗೌಡ, ನಾರಾಯಣಗೌಡ, ಆಶ್ವತ್ಥ್ ನಾರಾಯಣ, ಮಧುಕುಮಾರ್, ಕೃಷ್ಣ, ದೊಡ್ಡವೆಂಕಟಯ್ಯ, ಗೋವಿಂದರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲಸ ಕಾರ್ಯಗಳಿಗೆ ಕಚೇರಿಗೆ ಹೋಗುವ ಸಾರ್ವಜನಿಕರು ಇಲ್ಲಿ ಹಾಕಿರುವ ಫ್ಲೆಕ್ಸ್ ಕಟೌಟ್‌ಗಳಿಗೆ ಅಸಮಾದಾನ ಮತ್ತು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.
‘ಸಾರ್ವಜನಿಕವಾಗಿ ಫ್ಲೆಕ್ಸ್, ಕಟೌಟ್‌ಗಳನ್ನು ಹಾಕಲು ಪುರಸಭೆ ಮುಖ್ಯಾಧಿಕಾರಿ ಅನುಮತಿ ಪಡೆಯಬೇಕಾಗುತ್ತದೆ. ತಾಲ್ಲೂಕು ಆಡಳಿತ ಸೌಧದ ಮುಂದೆ ಫ್ಲೆಕ್ಸ್, ಕಟೌಟ್‌ಗಳನ್ನು ಹಾಕಲು ಪುರಸಭೆ ಮುಖ್ಯಾಧಿಕಾರಿ ಅನುಮತಿ ನೀಡಿದ್ದರೂ, ಅದು ತಪ್ಪಾಗುತ್ತದೆ. ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮವಹಿಸಲಾಗುವುದು’ ಎಂದು ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಹೇಳಿದರು. ಫ್ಲೆಕ್ಸ್‌ಗಳ ಮಾಹಿತಿ ಪಡೆಯಲು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.