ADVERTISEMENT

ಎಫ್‌ಎಸ್‌ಎಸ್‌ಎಐ ನೋಂದಣಿ ಮಾಡಿಸದೆ ವಹಿವಾಟು: ರೆಸ್ಟೊರೆಂಟ್‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:15 IST
Last Updated 25 ಫೆಬ್ರುವರಿ 2026, 6:15 IST
ಜಕ್ಕನಹಳ್ಳಿ ಅನಿಲ್ ಚಿರಾಗ್ ರೆಸ್ಟೊರೆಂಟ್‌ಗೆ ಬೀಗ ಹಾಕಿದ ಅಧಿಕಾರಿಗಳು
ಜಕ್ಕನಹಳ್ಳಿ ಅನಿಲ್ ಚಿರಾಗ್ ರೆಸ್ಟೊರೆಂಟ್‌ಗೆ ಬೀಗ ಹಾಕಿದ ಅಧಿಕಾರಿಗಳು   

ಮೇಲುಕೋಟೆ: ಸಮೀಪದ ಜಕ್ಕನಹಳ್ಳಿ ಸರ್ಕಲ್‌ನ ಅನಿಲ್ ಚಿರಾಗ್ ರೆಸ್ಟೊರೆಂಟ್‌ನವರು ಎಫ್‌ಎಸ್‌ಎಸ್‌ಎಐ ನೋಂದಣಿ ಮಾಡಿಸದೇ ಕಾನೂನು ಬಾಹಿರವಾಗಿ ವಹಿವಾಟು ನಡೆಸುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೀಗ ಹಾಕಿಸಿದ್ದಾರೆ.

‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006 ಅಡಿಯಲ್ಲಿ ಎಫ್‌ಎಸ್‌ಎಸ್‌ಎಐ ನೋಂದಣಿ ಮಾಡಿಸದೇ ವಹಿವಾಟು ನಡೆಸುತ್ತಿದ್ದರು. ಅನುಮತಿ ಪಡೆಯುವಂತೆ ನೋಟಿಸ್ ನೀಡಲಾಗಿತ್ತು, ನ್ಯಾಯಾಲಯಕ್ಕೂ ಗೈರು ಆಗಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ ಶಿವನಂದ ಮೂರ್ತಿ ಆದೇಶದಂತೆ ಮಂಗಳವಾರ  ಭೇಟಿ ನೀಡಿ ಬೀಗ ಹಾಕಲಾಗಿದೆ’ ಎಂದು ಜಕ್ಕನಹಳ್ಳಿ ಪಿಡಿಒ ಸುರೇಶ್ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಪ್ರಮೋದ್ ಪಾಲ್ಗೊಂಡಿದರು.

ADVERTISEMENT

‘ಎಂಟು ವರ್ಷಗಳ ಹಿಂದೆ ಈ ರೆಸ್ಟೊರೆಂಟ್ ಆರಂಭವಾಗಿದೆ. ಅಧಿಕಾರಿಗಳು, ಪೊಲೀಸರು ಎಷ್ಟೋ ಬಾರಿ ಇಲ್ಲಿಯೇ ಊಟ ಮಾಡಿ ಹೋಗಿದ್ದಾರೆ. ಮೇಲುಕೋಟೆ ಹೋಬಳಿಯಲ್ಲಿ ಅನುಮತಿ ಇಲ್ಲದೇ ಹಲವು ಡಾಬಾಗಳು ವಹಿವಾಟು ನಡೆಸುತ್ತಿವೆ, ಅಧಿಕಾರಿಗಳು ಎಲ್ಲಾ ಕಡೆ ಕಾರ್ಯಾಚರಣೆ ಮಾಡಿ ಕ್ರಮ ಕೈಗೊಳ್ಳಲಿ’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.