ADVERTISEMENT

ಸೋಲು ಗೊತ್ತಿದ್ದರಿಂದಲೇ ಮತಕಳವು ಆರೋಪ: ನಿವೃತ್ತ ನ್ಯಾ. ಎನ್‌.ಸಂತೋಷ್‌ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 23:40 IST
Last Updated 15 ನವೆಂಬರ್ 2025, 23:40 IST
ಸಂತೋಷ್‌ ಹೆಗ್ಡೆ 
ಸಂತೋಷ್‌ ಹೆಗ್ಡೆ    

ಮಂಡ್ಯ: ‘ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಕಾಂಗ್ರೆಸ್‌ನವರಿಗೆ ಮೊದಲೇ ಗೊತ್ತಿತ್ತು. ಅದಕ್ಕಾಗಿಯೇ ಮತಕಳವು ಆರೋಪ ಮಾಡುತ್ತಿದ್ದರು’ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್‌.ಸಂತೋಷ್‌ ಹೆಗ್ಡೆ ದೂರಿದರು.

ಶನಿವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮತಕಳವು ಅಷ್ಟು ಸುಲಭವಿಲ್ಲ, ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೋತಿದ್ದಕ್ಕೆ ಕಾರಣ ಕೊಡುತ್ತಾರಷ್ಟೆ; ಬಾಯಿಗೆ ಬಂದಂತೆ ಹೇಳ್ತಾರಷ್ಟೆ’ ಎಂದರು.

ಈ ಸರ್ಕಾರಲ್ಲೂ ಭ್ರಷ್ಟಾಚಾರ: ‘ಬಿಜೆಪಿ, ಜೆಡಿಎಸ್‌ ಸರ್ಕಾರದಲ್ಲಿ ಇದ್ದಂತೆ ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ’ ಎಂದು ಆರೋಪಿಸಿದರು.

ADVERTISEMENT

‘ಹಣ ಕೊಟ್ಟು ಹುದ್ದೆಗೆ ಹೋದವರಿಗೆ ಹಣ ಮಾಡುವುದೇ ಕೆಲಸವಾಗಿದೆ. ಶೇ 40ರಷ್ಟು ಕಮಿಷನ್‌ ಕೊಟ್ಟರೆ ಉಳಿದ ಹಣದಲ್ಲಿ ರಸ್ತೆ ಗುಂಡಿ ಮುಚ್ಚೋದು ಹೇಗೆ?’ ಎಂದರು. 

‘ಲಂಚ ಪಡೆದು ಸಿಕ್ಕಿ ಹಾಕಿಕೊಂಡರೆ ನ್ಯಾಯಾಲಯದಿಂದ ಶಿಕ್ಷೆಯಾಗಲು 30 ವರ್ಷಗಳಾಗುತ್ತವೆ. ಅದಕ್ಕಾಗಿಯೇ ಯಾರೂ ಕಾನೂನಿಗೆ ಹೆದರುತ್ತಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.