ಬೆಳಕವಾಡಿ: ಸಮೀಪದ ಪೂರಿಗಾಲಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಲಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹತ್ತು ಸ್ಥಾನ ಅವಿರೋಧ, ಎರಡು ಸ್ಥಾನಕ್ಕೆ ಚುನಾಯಿತರಾಗಿ ಆಯ್ಕೆಯಾದರು.
ಒಟ್ಟು 12 ಸ್ಥಾನಗಳಿಗೆ ನಿಗದಿಯಾಗಿದ್ದು, 12 ಸ್ಥಾನಗಳಿಗೆ 29 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಜಿ.ಎಂ.ರಾಮಕೃಷ್ಣ ಆಯ್ಕೆ ಘೋಷಿಸಿದರು.
ಸಾಲಗಾರರ ಕ್ಷೇತ್ರದಿಂದ ಅವಿರೋಧ ನಿರ್ದೇಶಕರರಾಗಿ ಸಾಮಾನ್ಯ ಕ್ಷೇತ್ರದಿಂದ ಬಿ.ಗುರುಪ್ರಸಾದ್, ಬಸವರಾಜು, ಪಿ.ಮಲ್ಲಪ್ಪ, ಸಿ.ಎನ್.ರಾಜೇಂದ್ರ, ರಾಜು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪಿ.ಎಂ.ನರೇಂದ್ರಸ್ವಾಮಿ, ಮಹಿಳಾ ಮೀಸಲು ಕ್ಷೇತ್ರದಿಂದ ಪುಟ್ಟಮ್ಮ, ಜಿ.ಲೀಲಾವತಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜ್ಯೋತಿ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಎಂ.ಮಹದೇವಸ್ವಾಮಿ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಚಂದ್ರಶೇಖರ್ ಮೂರ್ತಿ (ಸಾಮಾನ್ಯ) ಮತ್ತು ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಚಿಕ್ಕ ಬಸವರಾಜು ಚುನಾಯಿತರಾಗಿ ಆಯ್ಕೆಯಾದರು.
ಸಿಇಒ ಎಚ್.ಎಲ್.ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಬಸವರಾಜು, ಕೆ.ವಿ.ಸುಬ್ರಮಣ್ಯರಾಜೇ ಅರಸು, ಬಸವರಾಜು, ಶಿವಮೂರ್ತಿ ವಿಜೇತರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.