ADVERTISEMENT

ಮದ್ದೂರು: ಶನಿ ದೇವಾಲಯದೊಳಗೆ ಬಂದ ಕಾಗೆ, ಭಕ್ತರಲ್ಲಿ ಆಶ್ಚರ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 13:23 IST
Last Updated 19 ಅಕ್ಟೋಬರ್ 2019, 13:23 IST
   

ಮದ್ದೂರು: ತಾಲ್ಲೂಕಿನ ಚಾಮನಹಳ್ಳಿಯ ಶನಿ ದೇವಾಲಯದೊಳಗೆ ಕಾಗೆಯೊಂದು ಪ್ರವೇಶಿಸಿದ್ದು, ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಅರ್ಚಕರಾದ ಶ್ರೀನಿವಾಸ, ಕೃಷ್ಣ ಅವರು ಅಭಿಷೇಕ ಮಾಡುವಾಗ ಕಾಗೆ ದೇವಾಲಯ ಪ್ರವೇಶಿಸಿದೆ. ಕಾಗೆಗೂ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗಿದೆ. ಅದು ಅಭಿಷೇಕದ ಹಾಲು ಕುಡಿದು ಶನಿದೇವರ ವಿಗ್ರಹದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದೆ.

ಶನಿವಾರವಾದ್ದರಿಂದ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಶನಿ ವಾಹನ ಕಾಗೆಯ ದರ್ಶನ ಪಡೆಯಲು ನೂಕುನುಗ್ಗಲು ಉಂಟಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.