ADVERTISEMENT

ಮಳವಳ್ಳಿ| ವಿಷಪ್ರಾಶನದ ಶಂಕೆ: 16 ಕುರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:00 IST
Last Updated 13 ಜನವರಿ 2026, 4:00 IST
ಮಳವಳ್ಳಿ ತಾಲ್ಲೂಕಿನ ಚನ್ನಪಿಳ್ಳೆಕೊಪ್ಪಲಿನಲ್ಲಿ ವಿಷಪ್ರಾಶನದಿಂದ ಸಾವನ್ನಪ್ಪಿರುವ ಕುರಿಗಳು
ಮಳವಳ್ಳಿ ತಾಲ್ಲೂಕಿನ ಚನ್ನಪಿಳ್ಳೆಕೊಪ್ಪಲಿನಲ್ಲಿ ವಿಷಪ್ರಾಶನದಿಂದ ಸಾವನ್ನಪ್ಪಿರುವ ಕುರಿಗಳು   

ಮಳವಳ್ಳಿ: ತಾಲ್ಲೂಕಿನ ಚನ್ನಪಳ್ಳೆಕೊಪ್ಪಲು ಗ್ರಾಮದಲ್ಲಿ ಸೋಮವಾರ ವಿಷ ಪ್ರಾಶನದಿಂದ 16 ಕುರಿಗಳು ಸಾವನ್ನಪ್ಪಿದ್ದು, ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ.

ಗ್ರಾಮದ ಸಿದ್ದಯ್ಯನವರ ಮಗ ರೈತ ಕರಿಯಪ್ಪ ಎಂಬವರ 15 ಕುರಿ ಹಾಗೂ ಒಂದು ಟಗರು ಸಾವನ್ನಪ್ಪಿವೆ.‌ ಕಿಡಿಗೇಡಿಗಳು ಕರಿಯಪ್ಪ ಅವರ ಮನೆಯ ಹಿತ್ತಲಿನಲ್ಲಿ ಇರಿಸಿದ್ದ ಕುಡಿಯುವ ನೀರಿನ ಬಕೆಟ್‌ಗೆ ವಿಷ‌ ಹಾಕಿದ್ದರಿಂದ ದುರ್ಘಟನೆ ನಡೆದಿದೆ. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಬಂಧಿಸಬೇಕು. ಕುರಿಗಳ ಸಾವಿಗೆ ಪರಿಹಾರ ನೀಡಬೇಕು ಎಂದು ರೈತ ಕುಟುಂಬ ಜಿಲ್ಲಾಡಳಿತವನ್ನು ಆಗ್ರಹಿಸಿದೆ.