ADVERTISEMENT

ಚೆನ್ನೀಪುರ: ರೇಷ್ಮೆ ಬೆಳೆ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:13 IST
Last Updated 7 ಫೆಬ್ರುವರಿ 2025, 16:13 IST
ಹಲಗೂರು ಸಮೀಪದ ಚೆನ್ನೀಪುರ ಗ್ರಾಮದಲ್ಲಿ ನಡೆದ ರೇಷ್ಮೆ ಬೆಳೆ ಕ್ಷೇತ್ರೋತ್ಸವವನ್ನು ರೈತರು ಮತ್ತು ಅಧಿಕಾರಿಗಳು ಉದ್ಘಾಟಿಸಿದರು
ಹಲಗೂರು ಸಮೀಪದ ಚೆನ್ನೀಪುರ ಗ್ರಾಮದಲ್ಲಿ ನಡೆದ ರೇಷ್ಮೆ ಬೆಳೆ ಕ್ಷೇತ್ರೋತ್ಸವವನ್ನು ರೈತರು ಮತ್ತು ಅಧಿಕಾರಿಗಳು ಉದ್ಘಾಟಿಸಿದರು   

ಹಲಗೂರು: ‘ರೈತರು ದ್ವಿತಳಿ ಬಿತ್ತನೆ ಗೂಡುಗಳನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯುವ ಮೂಲಕ ಅಧಿಕ ಲಾಭ ಪಡೆಯಬಹುದು’ ಎಂದು ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.

ಹಲಗೂರು ಸಮೀಪದ ಚೆನ್ನೀಪುರ ಗ್ರಾಮದಲ್ಲಿ ರೇಷ್ಮೆ ಇಲಾಖೆ ವತಿಯಿಂದ ರೈತರಿಗೆ ಏರ್ಪಡಿಸಿದ್ದ ದ್ವಿತಳಿ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡಿ.ಹಲಸಹಳ್ಳಿ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾ ಅಧಿಕಾರಿಗಳಾದ ನರಸಿಂಹಮೂರ್ತಿ ಮಾತನಾಡಿ, ‘ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಮಹತ್ವ ಹಿಪ್ಪು ನೇರಳೆ ಕೃಷಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ರೇಷ್ಮೆ ಗೂಡು ಸಿಗಬೇಕಾದರೆ ಬೇಸಿಗೆ ಕಾಲದಲ್ಲಿ ನೀರಿನ ಸಮಗ್ರ ನಿರ್ವಹಣೆ ಹಾಗೂ ಹಿಪ್ಪು ನೇರಳೆ ಸೊಪ್ಪಿನ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ರೇಷ್ಮೆ ಇಲಾಖೆಯ ಅಧಿಕಾರಿಗಳಾದ ಕಿರಣ್, ಆರ್.ಪೂಜಾ, ಹೆಚ್.ಜಿ.ಆಶಾ ಬಿ.ಆರ್. ಕಿರಣ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.