ADVERTISEMENT

ಫೆ. 3ರ ಧರಣಿ ರಾಜಕೀಯ ಪ್ರೇರಿತ: ಚಿದಂಬರಮೂರ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 15:45 IST
Last Updated 1 ಫೆಬ್ರುವರಿ 2025, 15:45 IST
<div class="paragraphs"><p>ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದಾಧಿಕಾರಿಗಳ ಸಭೆಯಲ್ಲಿ ಜಾಗೃತಿ ಸಮಿತಿ ಸದಸ್ಯ ಚಿದಂಬರ ಮೂರ್ತಿ ಮಾತನಾಡಿದರು, </p></div>

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದಾಧಿಕಾರಿಗಳ ಸಭೆಯಲ್ಲಿ ಜಾಗೃತಿ ಸಮಿತಿ ಸದಸ್ಯ ಚಿದಂಬರ ಮೂರ್ತಿ ಮಾತನಾಡಿದರು,

   

ಮದ್ದೂರು : ಇದೇ ಫೆಬ್ರವರಿ 3 ರ ಸೋಮವಾರ ಪಟ್ಟಣದ ಪುರಸಭೆಯ ಮುಂದೆ ದಲಿತಪರ ಸಂಘಟನೆಗಳ ಸಮನ್ವಯ ಸಮಿತಿಯಿಂದ ಕರೆನೀಡಿರುವ ಅನಿರ್ದಿಷ್ಟಾವಧಿ ಧರಣಿ ರಾಜಕೀಯ ಪ್ರೇರಿತವಾಗಿದ್ದು,ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅವರ ವಿರುದ್ಧ ಕರೆ ನೀಡಿರುವ ಧರಣಿಯನ್ನು ವಿವಿಧ ಸಂಘಟನೆಗಳು ಖಂಡಿಸುತ್ತದೆ ಎಂದು ಜಾಗೃತಿ ಸಮಿತಿ ಸದಸ್ಯ ಎಸ್.ಚಿದಂಬರಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದಾಧಿಕಾರಿಗಳ ಸಭೆ ವೇಳೆ ಹಾಗೂ ನಂತರ ಕರೆಯಲಾಗಿದ್ದ ಪತ್ರಿಕಾಘೋಷ್ಟಿಯಲ್ಲಿ ಅವರು ಮಾತನಾಡಿದರು ಅವರು ಫೆ. 3 ರ ಸೋಮವಾರ ಶಾಸಕರ ವಿರುದ್ಧ ಕೆಲ ವ್ಯಕ್ತಿಗಳು ಇಲ್ಲಸಲ್ಲದ ಆರೋಪ ಮಾಡಿ ಪುರಸಭೆ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗುತ್ತಿರುವ ಕ್ರಮ ಸರಿಯಲ್ಲವೆಂದರು.

ADVERTISEMENT

ಡಾ.ಜೈಭೀಮ್ ದಲಿತ ಜಾಗೃತಿ ಸಮಿತಿ ಸಿ.ಎ.ಕೆರೆ ಹೋಬಳಿ ಒಕ್ಕೂಟ, ಕೆ.ಆರ್.ಡಿ.ಎಸ್.ಎಸ್ ಹಾಗೂ ಪೌರ ಕಾರ್ಮಿಕರ ಮಹಾಸಂಘದ ಪದಾಧಿಕಾರಿಗಳು ಅನಿಧರ್ಿಷ್ಟಾವಧಿ ಧರಣಿಯನ್ನು ಖಂಡಿಸಲಿದ್ದು ಸಮನ್ವಯ ಸಮಿತಿಯ ಸಭೆ ಕರೆಯದೆ ಕೆಲವೇ ವ್ಯಕ್ತಿಗಳು ಏಕಪಕ್ಷೀಯ ನಿರ್ಧಾರ ವನ್ನು ಕೈಗೊಂಡು ಪ್ರತಿಭಟನೆಗೆ ಮುಂದಾಗುತ್ತಿರುವುದು ಎಷ್ಟು ಸರಿ ಎಂದರು.

ಪುರಸಭೆ ಹೊರಗುತ್ತಿಗೆ ನೌಕರ ಸಿ.ಎಂ.ಮನೀಶ್ ರವರನ್ನು ಆರ್.ಸಿ. ಬಿಸಿನೆಸ್ ಸೆಲ್ಯೂಷನ್ ಮೈಸೂರು ಕೆಲಸದಿಂದ ತೆರವುಗೊಳಿಸಿದ್ದು , ಆದರೆ ಕೆಲ ವ್ಯಕ್ತಿಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮನೀಸ್ ರವರನ್ನು ಶಾಸಕರೇ ಕೆಲಸದಿಂದ ವಜಾಗೊಳಿಸಿದ್ದಾರೆಂಬ ನೆಪವಿಟ್ಟುಕೊಂಡು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗುತ್ತಿರುವ ಕ್ರಮ ಸರಿಯಲ್ಲವೆಂದರು.

ಶಾಸಕರು ಸುಳ್ಳು ದೂರು ದಾಖಲಿಸಿದ್ದಾರೆಂದು ಧರಣಿ ನಡೆಸುವುದು ನ್ಯಾಯ ಸಮ್ಮತವಲ್ಲ ವಿನಾಕಾರಣ ಆಧಾರ ರಹಿತವಾಗಿ ಶಾಸಕರ ಹೆಸರನ್ನು ಎಳೆದು ತರುತ್ತಿರುವ ಕ್ರಮ ಸರಿಯಲ್ಲವೆಂದು ಆರೋಪಿಸಿದ ಅವರು ಕೂಡಲೇ ಪ್ರತಿಭಟನೆಯನ್ನು ವಾಪಸ್ ಪಡೆಯುವಂತೆ ತಪ್ಪಿದ್ದಲ್ಲಿ ತಾವು ಸಹ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಭಾರತೀನಗರ ಎಸ್.ಸಿ. ಎಸ್.ಟಿ ವಿಭಾಗದ ಅಧ್ಯಕ್ಷ ತಿಮ್ಮಯ್ಯ, ತರೀಕೆರೆ ಕಾಲೋನಿ ರಾಮಾನಂದ್,ಪುರಸಭಾ ಮಾಜಿ ಸದಸ್ಯ ಮರಿದೇವರು, ಮುಖಂಡರಾದ ಭಾನುಪ್ರಕಾಶ್, ಸಿದ್ದರಾಜು, ಪ್ರಸಾದ್, ಗುರುಲಿಂಗಯ್ಯ, ಕಿರಣ್, ದೊರೆಸ್ವಾಮಿ, ಕುಮಾರ್, ಮಹದೇವಸ್ವಾಮಿ, ಕಾರ್ಕಳ್ಳಿ ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.